ಬುರೂಜ್ ಶಾಲೆ: ಅಂತರಾಷ್ಟ್ರೀಯ ಯೋಗ ದಿನ ಆಚರಣೆ

0

ಪುತ್ತೂರು: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ 11 ನೇ ವರುಷದ ಅಂತರಾಷ್ಟ್ರೀಯ ಯೋಗ ದಿನವನ್ನು ಬಹಳ ಶಿಸ್ತು ಬದ್ದವಾಗಿ ಶಾಲೆಯ ಎಲ್ಲಾ ಸ್ಕೌಟ್ಸ್ -ಗೈಡ್ಸ್ ವಿದ್ಯಾರ್ಥಿಗಳು ಆಚರಿಸಿದರು.

ಶಾಲಾ ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್ ಮಾತನಾಡಿ ಯೋಗ ಆರೋಗ್ಯವನ್ನು ಸುಧಾರಿಸುತ್ತದೆ. ಮಾನಸಿಕವಾಗಿ ಸದೃಢವಾಗಿ ಬಲಪಡಿಸುತ್ತದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಮುಖ್ಯ ಶಿಕ್ಷಕಿ ಜಯಶ್ರೀ ಬಿ, ನೂರ್ ಜಹಾನ್, ಖುರ್ಷಿದ್, ವನಿತಾ ಶೆಟ್ಟಿ, ಅನ್ನಪೂರ್ಣೇಶ್ವರಿ, ದಿವ್ಯ, ಮಮತಾ ಆರ್, ಹಾಫಿಳಾ,ಸಪ್ನಾಝ್ ,ನೀಲಮ್ಮಕ್ಕ ಭಾಗವಹಿಸಿದ್ದರು. ಶೇಖ್ ಜಲಾಲುದ್ದೀನ್ ಸ್ವಾಗತಿಸಿದರು.ಚಂದ್ರಾವತಿ ಧನ್ಯವಾದವಿತ್ತರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಎಲ್ಸಿ ಲಸ್ರಾದೋ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here