ಮುಕ್ರಂಪಾಡಿ ಬಾಲಕಿಯರ ಸ.ಪ.ಪೂ ಕಾಲೇಜಿನ ವಿದ್ಯಾರ್ಥಿ ಸಂಘ ರಚನೆ – ನಾಯಕಿ: ಫಾತಿಮತ್ ರಿಫಾನ, ಕಾರ್ಯದರ್ಶಿ: ಶೈನಿ ಕೆ

0

ಪುತ್ತೂರು: ಮುಕ್ರಂಪಾಡಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಸಂಸ್ಥೆಯ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಜೂ.19ರಂದು ನಡೆಯಿತು. ಕಾಲೇಜು ವಿದ್ಯಾರ್ಥಿ ನಾಯಕಿಯಾಗಿ ವಾಣಿಜ್ಯ ವಿಭಾಗದ ಫಾತಿಮತ್ ರಿಫಾನ ಇವರನ್ನು ಇವಿಎಂ ಸಿಮ್ಯುಲೇಟರ್ ಆಪ್ ಮೂಲಕ ಮತವನ್ನು ಚಲಾಯಿಸಿ ಆಯ್ಕೆಮಾಡಲಾಯಿತು.

ಕಾರ್ಯದರ್ಶಿಯಾಗಿ ವಾಣಿಜ್ಯ ವಿಭಾಗದ ಶೈನಿ ಕೆ ಇವರು ಸರ್ವಾನುಮತದಿಂದ ಆಯ್ಕೆಯಾದರು. ಇವಿಎಂ ಸಿಮ್ಯುಲೇಟರ್ ಆಪ್ ಪ್ರಯೋಗವನ್ನು ಮಾಡಲು ಕಾಲೇಜಿನ ಉಪನ್ಯಾಸಕಿಯರಾದ ಜಯಲಕ್ಷ್ಮಿ, ನಿರ್ಮಲ ಮತ್ತು ಲವೀನ ಲತಾ ಸಾಂತಮಯೋರ್ ಸಹಕರಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಪ್ರಮೀಳ ಜೆಸ್ಸಿ ಕ್ರಾಸ್ತಾ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿ ಸಂಘದ ಸಂಯೋಜಕರಾದ ಚಿತ್ರಲೇಖ ಕೆ. ಚುನಾವಣೆಯ ಮೇಲ್ವಿಚಾರಣೆ ವಹಿಸಿದ್ದರು. ಉಪನ್ಯಾಸಕ ವರ್ಗದವರು ಸಹಕರಿಸಿದ್ದರು.

LEAVE A REPLY

Please enter your comment!
Please enter your name here