





ಉಪ್ಪಿನಂಗಡಿ:ಉಪ್ಪಿನಂಗಡಿ ವೇದಶಂಕರ ನಗರ ಶ್ರೀರಾಮ ಶಾಲೆಯಲ್ಲಿ ಜೂ.27ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಉಪ್ಪಿನಂಗಡಿ ಘಟಕ ಇದರ ವತಿಯಿಂದ ಉಚಿತ ಯಕ್ಷಗಾನ ತರಬೇತಿ ಉದ್ಘಾಟನೆಗೊಂಡಿತು.


ಕಾರ್ಯಕ್ರಮವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಜಗದೀಶ್ ಶೆಟ್ಟಿ ಉದ್ಘಾಟಿಸಿ,ಪಟ್ಲ ಫೌಂಡೇಶನ್ ಸ್ಥಾಪನೆಯ ಉದ್ದೇಶ , ಕಾರ್ಯವೈಖರಿಯನ್ನು ತಿಳಿಸಿದರು.





ಪಟ್ಲ ಫೌಂಡೇಶನ್ ಉಪ್ಪಿನಂಗಡಿ ಘಟಕದ ಸದಸ್ಯರಾದ ಸುಧಾಕರ್ ಶೆಟ್ಟಿ ಮಾತನಾಡಿ, ಮಕ್ಕಳು ಕಲೆಯನ್ನು ಉಳಿಸಿಕೊಂಡು, ಉತ್ತಮ ಸಂಸ್ಕಾರ ಬೆಳೆಸಿಕೊಂಡು ಹೋಗಬೇಕಾದರೆ ಇಂತಹ ತರಬೇತಿಗಳು ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕ ಯು. ಜಿ ರಾಧಾ ಮಾತನಾಡಿ, ಉಚಿತ ಯಕ್ಷಗಾನ ತರಬೇತಿಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಯಕ್ಷಗಾನ ನಾಟ್ಯ ಗುರು ಸತೀಶ್ ಆಚಾರ್ಯ ಮಾಣಿ ಇವರನ್ನು ಸ್ವಸ್ತಿಕ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಶಿಕ್ಷಕರಾದ ಪೂವಪ್ಪ ,ಪ್ರಭಾರ ಮುಖ್ಯ ಶಿಕ್ಷಕಿ ಉಷಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ವಿದ್ಯಾ ನಿರ್ವಹಿಸಿದರು.








