





ಪುತ್ತೂರು: ಕೂರತ್ ಎಂಬಲ್ಲಿ ಜೂ.25 ರಂದು ನಡೆದ ಊರೂಸ್ ಮುಬಾರಕ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಸರಕಾರದ ಸ್ಪೀಕರ್ ಯು.ಟಿ ಖಾದರ್ ರವರು ಕಾರ್ಯಕ್ರಮದ ಬಳಿಕ ಕಾಂಗ್ರೆಸ್ ಹಿರಿಯ ಮುಖಂಡ, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾಗಿರುವ ವಿಜಯಕುಮಾರ್ ಸೊರಕೆರವರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿ, ಕುಶಲೋಪಚಾರ ನಡೆಸಿದರು.



ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಸೊರಕೆರವರು ಸ್ಪೀಕರ್ ಯು.ಟಿ ಖಾದರ್ ರವರನ್ನು ಸ್ವಾಗತಿಸಿ, ಗೌರವಿಸಿದರು. ಕಾಂಗ್ರೆಸ್ ಮುಖಂಡರಾದ ಪಿ.ಪಿ ವರ್ಗೀಸ್, ನೂರುದ್ದೀನ್ ಸಾಲ್ಮರ, ಉಷಾ ಅಂಚನ್, ಸತೀಶ್ ಕುಮಾರ್ ಕೆಡೆಂಜಿ, ವೇದನಾಥ ಸುವರ್ಣ, ರಾಘವೇಂದ್ರ ಗೌಡ, ಮಾರಪ್ಪ ಶೆಟ್ಟಿ, ಪುಷ್ಪರಾಜ್, ವಿಶ್ವನಾಥ ಮಾಲ, ರಾಧಾಕೃಷ್ಣ ರೈ, ಗೋಪಾಲಕೃಷ್ಣ ಭಟ್ ಪಡಿಲಾಯ, ಪೀರ್ ಸಾಹೇಬ್, ಗಫೂರ್ ಕಲ್ಮಡ್ಕ, ದಿನೇಶ್ ಗೌಡ ಪಂಜ, ಸೆಬಾಸ್ಟಿಯನ್ ಕಡಬ, ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಸಹಿತ ಹಲವರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.












