ನಿಡ್ಪಳ್ಳಿ: ಪುತ್ತೂರು ಕ್ಯಾಂಪ್ಕೊ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಅಸಿಸ್ಟೆಂಟ್ ಸೂಪರ್ ವೈಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ಜಯಾನಂದ.ಕೆ ಎಂಬವರು ಇಂದು ತನ್ನ ಸೇವಾ ನಿವೃತ್ತಿ ಹೊಂದಲಿದ್ದಾರೆ.
1996 ರಲ್ಲಿ ಜ್ಯೂನಿಯರ್ ಆಪರೇಟರ್ ಆಗಿ ಕರ್ತವ್ಯಕ್ಕೆ ಹಾಜರಾದ ಇವರು ನಂತರ ಆಪರೇಟರ್ ಆಗಿ ನಂತರ ಸಿನೀಯರ್ ಆಪರೇಟರ್ ಆಗಿ ಭಡ್ತಿ ಹೊಂದಿ ನಂತರ ಅಸಿಸ್ಟೆಂಟ್ ಸೂಪರ್ ವೈಸರ್ ಆಗಿ ಸುಮಾರು 29 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ತನ್ನ 58 ನೇ ವರ್ಷದಲ್ಲಿ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ. ಸೇವಾ ಅವಧಿಯಲ್ಲಿ ಸಂಸ್ಥೆಯಲ್ಲಿ ಎಲ್ಲರೊಂದಿಗೆ ಬಹಳ ಆತ್ಮೀಯತೆಯಿಂದ ಬೆರೆತು ಎಲ್ಲರಿಗೂ ಬಹಳ ಅಚ್ಚುಮೆಚ್ಚಿನವರಾಗಿದ್ದರು.
ನೆಟ್ಟಣಿಗೆ ಮುಡ್ನೂರು ಗ್ರಾಮದ ಕೊಂಕಣಿಗುಂಡಿ ದಿವಂಗತ ಕುಂಞಣ್ಣ ಗೌಡ ಪೂವಕ್ಕ ದಂಪತಿಗಳ ಪುತ್ರರಾದ ಇವರು ಪ್ರಸ್ತುತ ಕಾವು ಮದ್ಲದಲ್ಲಿ ಪತ್ನಿ ಶೋಭಾವತಿ.ಎಂ ಮತ್ತು ಪುತ್ರರಾದ ಹರ್ಷಿಕಾ, ಹರ್ಷಿಕ್ ಇವರೊಂದಿಗೆ ವಾಸ್ತವ್ಯ ಹೊಂದಿದ್ದಾರೆ.