ಕುಂಬ್ರ ಶ್ರೀರಾಮ ಭಜನಾ ಮಂದಿರದ ಆಡಳಿತ ಸಮಿತಿಗೆ ಆಯ್ಕೆ

0

ಅಧ್ಯಕ್ಷ: ಮೋನಪ್ಪ ಪೂಜಾರಿ ಬಡಕ್ಕೋಡಿ, ಪ್ರ.ಕಾರ್ಯದರ್ಶಿ: ಹರೀಶ್ ರೈ ಮುಗೇರು, ಕೋಶಾಧಿಕಾರಿ: ರಾಜ್‌ಪ್ರಕಾಶ್ ರೈ ಕುಂಬ್ರ


ಪುತ್ತೂರು:
ಒಳಮೊಗ್ರು ಗ್ರಾಮದ ಕುಂಬ್ರ ಶ್ರೀರಾಮ ಭಜನಾ ಮಂದಿರದ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಮಂದಿರದ ವಠಾರದಲ್ಲಿ ನಡೆಯಿತು. ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಮೋನಪ್ಪ ಪೂಜಾರಿ ಬಡಕ್ಕೋಡಿಯವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ರೈ ಮುಗೇರು, ಕೋಶಾಧಿಕಾರಿಯಾಗಿ ರಾಜ್‌ಪ್ರಕಾಶ್ ರೈ ಕುಂಬ್ರ, ಉಪಾಧ್ಯಕ್ಷರುಗಳಾಗಿ ರತನ್ ರೈ ಕುಂಬ್ರ, ದಿನೇಶ್ ಗೌಡ, ಜತೆ ಕಾರ್ಯದರ್ಶಿಯಾಗಿ ಸುಷ್ಮಾ ಸತೀಶ್ ಕೋಡಿಬೈಲುರವರುಗಳನ್ನು ಆಯ್ಕೆ ಮಾಡಲಾಯಿತು.

ವಿವಿಧ ಸಮಿತಿಯ ಸಂಚಾಲಕರುಗಳಾಗಿ ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿಗೆ ಉಷಾ ನಾರಾಯಣ್ ಗೌಡ ಉರ್ವ, ಸಾರ್ವಜನಿಕ ಶ್ರೀ ಗಣೇಶೋತ್ಸವವಕ್ಕೆ ರಾಜೇಶ್ ರೈ ಪರ್ಪುಂಜ, ಅಂಕಿತ್ ರೈ ಕುಯ್ಯಾರು, ಕನ್ಯಾ ಸಂಕ್ರಮಣ ಪೂಜೆಗೆ ಆದರ್ಶ ಶೆಟ್ಟಿ ನೀರಳ, ವಾರದ ಭಜನಾ ಸಂಚಾಲಕರಾಗಿ ಅರುಣಾ ರೈ ಬಿಜಳ, ವಾರ್ಷಿಕ ಮಂಗಳೋತ್ಸವ ಸಮಿತಿಯಲ್ಲಿ ಅರ್ಧ ಏಕಾಹ ಭಜನೆಗೆ ಪದ್ಮನಾಭ ರೈ ಅರೆಪ್ಪಾಡಿ, ಯಕ್ಷಗಾನಕ್ಕೆ ಸಂತೋಷ್ ಕುಮಾರ್ ರೈ ಮೇಗಿನಗುತ್ತು, ಸತ್ಯನಾರಾಯಣ ಪೂಜೆಗೆ ನೇಮಿರಾಜ್ ರೈ ಕುರಿಕ್ಕಾರ, ಆಯುಧ ಪೂಜೆಗೆ ವಿಶ್ವನಾಥ ರೈ ಕೋಡಿಬೈಲುರವರುಗಳನ್ನು ಸಂಚಾಲಕರುಗಳನ್ನಾಗಿ ಆಯ್ಕೆ ಮಾಡಲಾಯಿತು. ಆಡಳಿತ ಸಮಿತಿಯ ಗೌರವ ಸಲಹೆಗಾರರಾಗಿ ಕುಂಬ್ರ ದುರ್ಗಾಪ್ರಸಾದ್ ರೈ, ಶ್ಯಾಮಸುಂದರ ರೈ ಕೊಪ್ಪಳ, ಉಮೇಶ್ ಕುಮಾರ್ ಬರಮೇಲು, ಶೇಖರ ರೈ ಕುರಿಕ್ಕಾರ, ದಿವಾಕರ ಶೆಟ್ಟಿ, ಸುಂದರ ರೈ ಮಂದಾರ, ಪ್ರೇಮ ರೈ ನೀರಳ, ಕರುಣಾ ರೈ ಬಿಜಳ, ಶಿವರಾಮ ಗೌಡ ಇದ್ಯಪೆ, ಅಮ್ಮು ಪೂಂಜಾ, ಗಂಗಾಧರ ರೈ ಕುಯ್ಯಾರು, ಮೋಹನದಾಸ ರೈ ಕುಂಬ್ರರವರುಗಳನ್ನು ಆಯ್ಕೆ ಮಾಡಲಾಯಿತು.


ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಚಂದ್ರಶೇಖರ ಗೌಡ ಬೊಳ್ಳಾಡಿ, ಆನಂದ ರೈ ಡಿಂಬ್ರಿ, ಅಶೋಕ್ ಕುಮಾರ್ ಬಡಕ್ಕೋಡಿ, ಸಂದೇಶ್ ಶೆಟ್ಟಿ, ಜಗನ್ನಾಥ ಪೂಜಾರಿ ಮುಡಾಲ, ಶಿವರಾಮ ಗೌಡ ಬೊಳ್ಳಾಡಿ, ರಾಮಯ್ಯ ಗೌಡ ಬೊಳ್ಳಾಡಿ, ಆಶಾ ಮಾಧವ ರೈ ಕುಂಬ್ರ, ಮೋಹಿನಿ ಡಿ.ಶೆಟ್ಟಿ, ನಳಿನಿ ಜಗನ್ನಾಥ ಪೂಜಾರಿ ಮುಡಾಲ, ಉದಯ ಮಡಿವಾಳ ಕುಂಬ್ರ, ಪುರಂದರ ಶೆಟ್ಟಿ ಮುಡಾಲ, ಪುರಂದರ ರೈ ಕುಯ್ಯಾರು, ಸ್ವಸ್ತಿಕ್ ರೈ, ಚಂದ್ರಶೇಖರ ರೈ ಕಲಾಯಿ, ರಾಜ್‌ಮೋಹನ್ ರೈ ನೀರಳ, ಶ್ರೀನಿವಾಸ ನಾಯ್ಕ ಮುಡಾಲಮೂಲೆ, ಸದಾಶಿವ ಆಚಾರ್ಯ ಉಜಿರೋಡಿರವರುಗಳನ್ನು ಆಯ್ಕೆ ಮಾಡಲಾಯಿತು. ಮಂದಿರದ ಅರ್ಚಕರಾಗಿ ಕೊರಗಪ್ಪ ಪೂಜಾರಿಯವರನ್ನು ನೇಮಕ ಮಾಡಲಾಯಿತು. ಆಡಳಿತ ಮಂಡಳಿಯ ಆಯ್ಕೆಯನ್ನು ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ್ದ ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ ಹಾಗೂ ಉಮೇಶ್ ಕುಮಾರ್ ಬರಮೇಲು ನಡೆಸಿಕೊಟ್ಟರು. ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಮುಗೇರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here