ಕೆಯ್ಯೂರು: ಕೆಯ್ಯೂರು ಗ್ರಾಮದ ಕಣಿಯಾರು ನಿವಾಸಿ ದಿ| ಮುತ್ತಪ್ಪ ಪೂಜಾರಿ, ಶಾರದ ದಂಪತಿಯ ಪುತ್ರ ಕೆ.ಅಮ್ಮಿ ಪೂಜಾರಿ ಕಣಿಯಾರು (68 ವ.) ಅಸೌಖ್ಯದಿಂದ, ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಹೃದಯಾಘಾತದಿಂದ ನಿಧನರಾದರು.
ಮೃತರು ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಪ್ರೇಮ, ಪುತ್ರರಾದ ಅಜಿತ್, ಸಂದೀಪ್, ಪುತ್ರಿ ಪ್ರಭಾ, ಅಳಿಯ ,ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಆಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.