ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿ ಎಂಬಲ್ಲಿ ಗುಡ್ಡವೊಂದಕ್ಕೆ ತ್ಯಾಜ್ಯದ ರಾಶಿ ತಂದು ಸುರಿದಿರುವುದು ಬೆಳಕಿಗೆ ಬಂದಿದೆ.ಇಲ್ಲಿಯ ಸ್ಥಳೀಯರು ಕಟ್ಟಿಗೆ ತರಲೆಂದು ಗುಡ್ಡಕ್ಕೆ ಹೋದ ಸಂದರ್ಭದಲ್ಲಿ ನಿರ್ಜನ ಪ್ರದೇಶದಲ್ಲಿ ಈ ತ್ಯಾಜ್ಯದ ರಾಶಿ ಕಂಡು ಬಂದಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.ಪ್ಲಾಸ್ಟಿಕ್ ಚೀಲ, ಪ್ಯಾಂಪರ್ಸ್, ನೀರಿನ ಬಾಟಲಿ, ಮದ್ಯದ ಬಾಟಲಿ , ಪ್ಲಾಸ್ಟಿಕ್ ಚಯರ್ ಸೇರಿದಂತೆ ವಿವಿಧ ತರದ ಪ್ಲಾಸ್ಟಿಕ್ ತ್ಯಾಜ್ಯವನ್ನು ಚೆಲ್ಲಿದ್ದಾರೆ.

ಆರೋಗ್ಯವಂತ ಪರಿಸರವನ್ನು ಕಾಪಾಡಲು ಸರಕಾರ ಎಷ್ಟೋ ಅಭಿಯಾನ ಕಾರ್ಯಕ್ರಮ ನಡೆಸುತ್ತಿದೆ. ತ್ಯಾಜ್ಯವನ್ನು ಸಂಗ್ರಹಿಸಿ ಕೊಡಲು ಪಂಚಾಯತ್ ಚೀಲಗಳನ್ನು ಮನೆ ಮನೆಗೆ ವಿತರಿಸಿ ಪರಿಸರದ ಸಂರಕ್ಷಣೆಗೆ ಪ್ರಯತ್ನಿಸುತ್ತಿದ್ದರೂ ಕೆಲ ಜನರಿಗೆ ಅರ್ಥವಾಗುತ್ತಿಲ್ಲ. ಇಂತಹ ಕಾನೂನು ಬಾಹಿರ ಕೃತ್ಯ ಎಸಗುವವರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಒಂದೇ ಮನೆಯಿಂದ ಕಸವನ್ನು ರಾಶಿ ಹಾಕಿ ಗುಡ್ಡೆಗೆ ತಂದು ಸುರಿದಿದ್ದಾರೆ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ.