ಪುತ್ತೂರು: ಓಮ್ನಿ ಕಾರು ಪಲ್ಟಿಯಾದ ಘಟನೆ ಮಂಗಳೂರು-ಬೆಂಗಳೂರು ಹೆದ್ದಾರಿಯ ಗೋಳಿತೊಟ್ಟು ಜಂಕ್ಷನ್ ಸಮೀಪ ನಡೆದಿದೆ.

ಭಾರೀ ಮಳೆ ಹಿನ್ನಲೆ ರಸ್ತೆಯಲ್ಲಿ ತುಂಬಿರುವ ನೀರನ್ನು ತಪ್ಪಿಸಲು ಹೋಗಿ ಚಾಲಕ ಕಾರನ್ನು ಬಲಬದಿಗೆ ತಿರುಗಿಸಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಪಲ್ಟಿಯಾಗಿದೆ.

ಕಾರಿನಲ್ಲಿ ದಂಪತಿ ಹಾಗೂ ಪುಟ್ಟ ಮಗುವಿದ್ದು, ಸಣ್ಣ-ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.