ಆರ್.ಐ.ಸಿ ಸಂಸ್ಥೆ ಒಂದಲ್ಲಾ ಒಂದು ದಿನ ರಾಜ್ಯದಲ್ಲಿ ಗುರುತಿಸುವಂತಾಗಬೇಕು-ಎಂ.ಎಸ್ ಮುಹಮ್ಮದ್
ಪುತ್ತೂರು: ರೆಂಜಲಾಡಿ ಇಸ್ಲಾಮಿಕ್ ಸೆಂಟರಿನಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಂಟೀನ್ ಮತ್ತು ತರಗತಿ ಕೊಠಡಿಗೆ ಶಿಲಾನ್ಯಾಸ ಕಾರ್ಯಕ್ರಮ ಜೂ.26ರಂದು ನಡೆಯಿತು. ಅಬೂನಜ ಉಸ್ತಾದ್ ಪರ್ಪುಂಜ ಶಿಲಾನ್ಯಾಸ ನೆರವೇರಿಸಿದರು.
ಪರಿಯಲ್ತಡ್ಕ ಜುಮಾ ಮಸೀದಿಯ ಅಧ್ಯಕ್ಷ ಎಂ.ಎಸ್ ಮುಹಮ್ಮದ್ ಮಾತನಾಡಿ ಹುಸೈನ್ ದಾರಿಮಿಯವರು ಶ್ರಮಪಟ್ಟು ಸಂಸ್ಥೆಯೊಂದನ್ನು ಆರಂಭಿಸಿದ್ದು ಈ ಸಂಸ್ಥೆ ಒಂದಲ್ಲಾ ಒಂದು ದಿನ ರಾಜ್ಯದಲ್ಲೇ ಗುರುತಿಸುವ ಸಂಸ್ಥೆಯಾಗಿ ಹೆಸರು ಪಡೆಯಬೇಕು, ಅದಕ್ಕಾಗಿ ನಾವೆಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ಸ್ವಾಗತಿಸಿದ ರೆಂಜಲಾಡಿ ಇಸ್ಲಾಮಿಕ್ ಸೆಂಟರ್‌ನ ಚೇರ್‌ಮೆನ್ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಆರ್.ಐ.ಸಿ ಸಂಸ್ಥೆಯನ್ನು ನೀವೆಲ್ಲರೂ ನಿಮ್ಮ ಸ್ವಂತ ಸಂಸ್ಥೆಯೆನ್ನುವ ಮನೋಭಾವನೆ ಹೊಂದಿರಬೇಕು, ನಮ್ಮ ಸಂಸ್ಥೆಗೆ ಅಗತ್ಯವಿರುವ ವಿದ್ಯಾರ್ಥಿಗಳ ಕ್ಯಾಂಟೀನ್ ಮತ್ತು ತರಗತಿ ಕಟ್ಟಡ ನೀವೆಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಬದ್ರುದ್ದೀನ್ ರಹ್ಮಾನಿ ಕೂಡುರಸ್ತೆ, ಇರ್ಷಾದ್ ಫೈಝಿ ಮುಕ್ವೆ, ಯಾಕೂಬ್ ದಾರಿಮಿ, ಪಿ.ಕೆ ಮುಹಮ್ಮದ್ ಕೂಡುರಸ್ತೆ, ಹಾಜಿ ಝೈನುದ್ದೀನ್ ಜೆ.ಎಸ್, ಮಹಮ್ಮದ್ ಅಮಾನಿ, ಅಬೂಬಕ್ಕರ್ ಮುಸ್ಲಿಯಾರ್, ಉಮರ್ ಉಸ್ತಾದ್, ಇಸ್ಮಾಯಿಲ್ ಹಾಜಿ, ಆರ್.ಎಂ ಅಲಿ ಹಾಜಿ, ಕೆ.ಎಂ ಹನೀಫ್ ರೆಂಜಲಾಡಿ, ಉಮ್ಮರ್ ಸುಲ್ತಾನ್ ರೆಂಜಲಾಡಿ, ರಹೀಂ ರೆಂಜಲಾಡಿ, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಅಝೀಝ್ ರೆಂಜಲಾಡಿ, ಮಹಮ್ಮದ್ ಕೆಜಿಎನ್, ಹನೀಫ್ ಕಲ್ಪಣೆ, ಯಾಕೂಬ್ ರೆಂಜಲಾಡಿ, ಹಸೈನಾರ್ ರೆಂಜಲಾಡಿ, ಮಹಮ್ಮದ್ ರೆಂಜಲಾಡಿ, ಅಬ್ಬು ರೆಂಜಲಾಡಿ, ಹಾರಿಸ್ ಕೂಡುರಸ್ತೆ, ಇಸ್ಮಾಯಿಲ್ ಕಟ್ಟತ್ತಡ್ಕ, ಹಬೀಬ್ ಕೂಡುರಸ್ತೆ ಮತ್ತಿತರರು ಉಪಸ್ಥಿತರಿದ್ದರು.