ಪುತ್ತೂರು: ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ 2025-26ನೇ ಶೈಕ್ಷಣಿಕ ಸಾಲಿನ ಮಂತ್ರಿಮಂಡಲವನ್ನು ಚುನಾವಣಾ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಯಿತು.
ನಾಯಕನಾಗಿ 10ನೇ ತರಗತಿಯ ಜೀವಿತ್ ಪಿ ಎಸ್ ಮತ್ತು ಉಪನಾಯಕಿಯಾಗಿ 9ನೇ ತರಗತಿಯ ಧನುಷಾ ಟಿ ಚುನಾಯಿತರಾದರು. ಕ್ರೀಡಾ ಕಾರ್ಯದರ್ಶಿಯಾಗಿ ಜೋಹನ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಪೂಜನ, ಶಿಕ್ಷಣ ಮಂತ್ರಿಯಾಗಿ ಅಪೇಕ್ಷಾ, ಆರೋಗ್ಯಯಾಗಿ ಮಂತ್ರಿ ಭನ್ನಿತ್, ಶಿಸ್ತು ಸಮಿತಿಗೆ ಸಂಹಿತಾ, ನೀರಾವರಿ ಮಂತ್ರಿಯಾಗಿ ಈಶಾನ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಿಥಾಲಿ, ಪ್ರಸಾರ ಸಮಿತಿಗೆ ಲಿಖಿತ್ ಇವರನ್ನು ಆಯ್ಕೆ ಮಾಡಲಾಯಿತು.
ವಿರೋಧ ಪಕ್ಷದ ನಾಯಕನಾಗಿ 10ನೇ ತರಗತಿಯ ಮೋಕ್ಷಿತ್ ವಿ.ಬಿ. ಮತ್ತು ಧನ್ವಿ ಸುಧೀರ್ ಹಾಗೂ ಸ್ಪೀಕರ್ ಆಗಿ ವರ್ಷ ಇವರನ್ನು ಆಯ್ಕೆ ಮಾಡಲಾಯಿತು. ಶಿಕ್ಷಕಿ ಶ್ರೀಲಕ್ಷ್ಮೀ ಮೊಳೆಯಾರ್ ಚುನಾವಣಾ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದರು. ಶಿಕ್ಷಕಿಯರಾದ ಸ್ಮಿತಾ, ಹರ್ಷಿಣಿ, ಅಂಜಲಿ, ದಿವ್ಯ ಇವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.