ಪುತ್ತೂರು: ಜು.2ರಂದು ಬೀಸಿದ ಗಾಳಿಗೆ ಅರಿಯಡ್ಕ ಗ್ರಾಮದ ಮೇಲಿನ ಬಳ್ಳಿಕಾನ ಎಂಬಲ್ಲಿ ಉದಯಕುಮಾರ್ ಎಂಬವರ ಮನೆಯ ಮುಂಭಾಗದ ಶೀಟ್ ಹಾಕಿದ ಮಾಡು ಕುಸಿತಗೊಂಡಿದೆ. ಘಟನೆಯಿಂದ ಅಂದಾಜು 40 ಸಾವಿರ ರೂ ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಅವರು ಘಟನೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
