ಪುತ್ತೂರು: ವಿವೇಕಾನಂದ ಕಲಾ,ವಾಣಿಜ್ಯ ಮತ್ತು ವಿಜ್ಞಾನ ( ಸ್ವಾಯತ್ತ) ಕಾಲೇಜು ಇದರ ಸ್ನಾತಕೋತ್ತರ ಪದವಿಯ ಎರಡನೇ ಹಾಗೂ ನಾಲ್ಕನೆಯ ಸೆಮಿಸ್ಟರ್ ನ ಫಲಿತಾಂಶ ಪ್ರಕಟಿಸಲಾಗಿದೆ.
ಎರಡನೇಯ ಸೆಮಿಸ್ಟರ್ ಎಂ ಎ( ಪತ್ರಿಕೋದ್ಯಮ) ಶೇ.100, ಎಂ ಕಾಂ ಶೇ.100ರಂತೆ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ನಾಲ್ಕನೆಯ ಸೆಮಿಸ್ಟರ್ ನಲ್ಲಿ ಎಂಎ ಪತ್ರಿಕೋದ್ಯಮ ಶೇ.100, ಎಂಕಾಂ ಶೇ.100, ಎಂಎಸ್ಸಿ ( ರಸಾಯನಶಾಸ್ತ್ರ) ಶೇ. 100 ರಷ್ಟು ಫಲಿತಾಂಶ ದಾಖಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಧರ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.