ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಕಿರಿಯ ಪ್ರಾ. ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ, ಹಿರಿಯ ಪ್ರಾ. ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ
ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ, ಪುತ್ತೂರು, ಇದರ ವತಿಯಿಂದ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ದರ್ಬೆ ಇಲ್ಲಿ ನಡೆದ ಪುತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಮತ್ತು ಹಿರಿಯ ಪ್ರಾಥಮಿಕ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ : ಕೀರ್ತನ್ ಪಿ.ಯು – ಚಿತ್ರಕಲೆ (ಪ್ರಥಮ), ಸನ್ಮಯ ಭಟ್ ವೈ – ಸಂಸ್ಕೃತ ಪಠಣ (ಪ್ರಥಮ), ಎನ್ ಸನ್ನಿಧಿ ರಾವ್ -ಆಶುಭಾಷಣ (ಪ್ರಥಮ), ಮಹೇಶ್ ವಿಠ್ಠಲ್ ವಗ್ಗರ – ಕ್ಲೇಮಾಡೆಲಿಂಗ್ (ದ್ವಿತೀಯ), ವೃದ್ಧಿ ಎ.ಸಿ – ಛದ್ಮವೇಷ (ತೃತೀಯ), ಅಣಿಮಾ ಬಿ – ದೇಶಭಕ್ತಿಗೀತೆ (ತೃತೀಯ)
ಹಿರಿಯ ಪ್ರಾಥಮಿಕ ವಿಭಾಗದಲ್ಲಿ: ಲಿಖಿತಾ ಕೆ – ಚಿತ್ರಕಲೆ (ಪ್ರಥಮ), ತನುಷಾ ಹೆಚ್ – ಅಭಿನಯಗೀತೆ (ಪ್ರಥಮ), ಶ್ರೀಕೃಷ್ಣ ಬಿ – ಆಶುಭಾಷಣ (ಪ್ರಥಮ), ಶ್ರೇಯಸ್ ಎ.ಜೆ – ಪ್ರಬಂಧ (ಪ್ರಥಮ), ಅಭಿನವ್ ಸಿ.ಎನ್- ಕಥೆ ಹೇಳುವುದು, ಶ್ರುತಿ ನಾಯಕ್ – ಕವನ ವಾಚನ (ದ್ವಿತೀಯ), ಗರಿಮಾ.ಬಿ- ದೇಶಭಕ್ತಿಗೀತೆ (ತೃತೀಯ)
