ಪುತ್ತೂರು: ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದ್ದು ನೂತನ ಅಧ್ಯಕ್ಷರಾಗಿ ಶಶಿಧರ್ ಕಿನ್ನಿಮಜಲು, ಕಾರ್ಯದರ್ಶಿಯಾಗಿ ನವೀನ್ ರೈ ಪಂಜಳ, ಕೋಶಾಧಿಕಾರಿ ಹಾಗೂ ಜೊತೆ ಕಾರ್ಯದರ್ಶಿಯಾಗಿ ಜಯಂತ್ ಬಾಯಾರುರವರು ಆಯ್ಕೆಯಾಗಿದ್ದಾರೆ.
ಉಳಿದಂತೆ ನಿಯೋಜಿತ ಅಧ್ಯಕ್ಷ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ರವಿಕುಮಾರ್ ರೈ, ಉಪಾಧ್ಯಕ್ಷರಾಗಿ ವಿಜಯ ಬಿ.ಎಸ್, ಸಾರ್ಜಂಟ್ ಎಟ್ ಆರ್ಮ್ಸ್ ಶಶಿಕಿರಣ್ ರೈ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಕೆ.ವಿಶ್ವಾಸ್ ಶೆಣೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಅಬ್ಬಾಸ್ ಕೆ.ಮುರ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಜಯಂತ್ ನಡುಬೈಲು, ಯೂತ್ ಸರ್ವಿಸ್ ನಿರ್ದೇಶಕರಾಗಿ ಮುರಳೀಶ್ಯಾಂ ಎಂ, ಚೇರ್ಮನ್ ಗಳಾಗಿ ನವೀನ್ ಶೆಟ್ಟಿ(ಮೆಂಬರ್ ಶಿಪ್), ಎಂ.ಪುರಂದರ ರೈ(ಟಿ.ಆರ್.ಎಫ್), ಪ್ರಕಾಶ್ ರೈ ಮನವಳಿಕೆ(ಪಬ್ಲಿಕ್ ಇಮೇಜ್), ನಿಶಾಂತ್ ರೈ(ಜಿಲ್ಲಾ ಪ್ರಾಜೆಕ್ಟ್), ಶರತ್ ಕುಮಾರ್ ರೈ(ಸಿ.ಎಲ್.ಸಿ.ಸಿ), ಡಾ.ಶ್ಯಾಮ್ ಪ್ರಸಾದ್(ಬುಲೆಟಿನ್ ಎಡಿಟರ್), ಆಂಜನಾ ಪೈ(ವೆಬ್/ಐಟಿ), ವಸಂತ್ ಜಾಲಾಡಿ(ಪೋಲಿಯೊ ಪ್ಲಸ್) ನಿಕಟಪೂರ್ವ ಅಧ್ಯಕ್ಷರಾಗಿ ಡಾ.ರವಿಪ್ರಕಾಶ್ ಕಜೆರವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಧರ್ ಕಿನ್ನಿಮಜಲುರವರು ಪುತ್ತೂರು ತಾಲಯ ಕುರಿಯ ಗ್ರಾಮದ ಕಿನ್ನಿಮಜಲು ಗರಡಿ ಮನೆತನದವರು. ಸಂಘಟನೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಹತ್ತು ಹಲವು ಅನುಭವವುಳ್ಳ ಶಶಿಧರ್ ಅವರು, ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷರಾಗಿ, ಬಿಲ್ಲವ ಸಂಘದ ಗ್ರಾಮ ಸಮಿತಿಯಲ್ಲಿ ಅಧ್ಯಕ್ಷರಾಗಿ, ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಹಾಗೂ ವಲಯ ಸಂಚಾಲಕರಾಗಿ, ಮತ್ತು ಯುವವಾಹಿನಿ ಕೇಂದ್ರ ಸಮಿತಿಯಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. 2019ರಲ್ಲಿ ಪುತ್ತೂರಿನಲ್ಲಿ ನಡೆದ ಯುವವಾಹಿನಿ ಕೇಂದ್ರ ಸಮಿತಿಯ ವಾರ್ಷಿಕ ಸಮಾವೇಶದ ಸಂಚಾಲಕರಾಗಿ ಸಮಾವೇಶವನ್ನು ಯಶಸ್ವಿಗೊಳಿಸಿರುತ್ತಾರೆ. ಧಾರ್ಮಿಕ ಬದುಕಿನಲ್ಲಿ ಅವರು ಉಳ್ಳಾಲ ಕುರಿಯ ಶ್ರೀ ಮಹಾವಿಷ್ಣುಮೂರ್ತಿ ದೇವಳದ ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿಯಾಗಿ, ಬ್ರಹ್ಮಬೈದೇರ್ಕಳ ಗರಡಿ, ಕಿನ್ನಿಮಜಲು ಇದರ ಆಡಳಿತ ಮೊಕ್ತೆಸರರೂ, ಶಿಬರಾಡಿ ಕುಂದರ್ ಕುಟುಂಬದ ಅಧ್ಯಕ್ಷರೂ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಪುತ್ತೂರು ತಾಲೂಕು ಸಮಿತಿಯ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ್ದಾರೆ. ರೋಟರಿ ಪುತ್ತೂರು ಈಸ್ಟ್ನಲ್ಲಿ ಅವರು 2 ಸಲ ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂಜಿನಿಯರ್ ಪದವೀಧರರಾಗಿರುವ ಇವರು ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಜಿಲ್ಲಾ ಸಮಾಲೋಚಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ನವೀನ್ ರೈರವರು ಪಂಜಳ ನಿವಾಸಿಯಾಗಿದ್ದು ಫೊಟೋಗ್ರಾಫರ್ಸ್ ಎಸೋಸಿಯೇಷನ್ ಪುತ್ತೂರು ಇದರ ವಲಯ ಪ್ರಧಾನ ಕಾರ್ಯದರ್ಶಿ ಹಾಗೂ ತಾಲೂಕಿನ ಅಧ್ಯಕ್ಷರಾಗಿ, ಅಭಿರಾಮ್ ಫ್ರೆಂಡ್ಸ್ ಕ್ಲಬ್ ಪುತ್ತೂರು ಅಧ್ಯಕ್ಷರಾಗಿ,ಸ್ನೇಹ ಯುವಕ ಮಂಡಲ ಪಂಜಳ ಅಧ್ಯಕ್ಷರಾಗಿ, ಸೌತ್ ಕೆನರಾ ಫೊಟೋಗ್ರಾಫರ್ಸ್ ಎಸೋಸಿಯೇಷನ್ ದ.ಕ ಜಿಲ್ಲೆ, ಉಡುಪಿ ಜಿಲ್ಲೆ ಇದರ ಪ್ರಧಾನ ಕಾರ್ಯದರ್ಶಿಯಾಗಿ ಎರಡು ವರ್ಷ ಹಾಗು ಪ್ರಸ್ತುತ ಜಿಲ್ಲಾ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಮಾಧ್ಯಮ ಸಂಚಾಲಕರು, ಸ್ನೇಹಿತರನ್ನು ಒಗ್ಗೂಡಿಸಿ ರಕ್ತದಾನಿಗಳ ಗುಂಪು ರಚಿಸಿ ರಕ್ತದ ಅವಶ್ಯಕತೆ ಇರುವವರಿಗೆ ರಕ್ತದಾನದ ಸೇವೆ ನೀಡುತ್ತಿದ್ದಾರೆ. ಧಾರ್ಮಿಕ ಹಾಗೂ ಸಮಾಜಮುಖಿ ಸಂಘಟನೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. 8 ವರ್ಷಗಳ ಹಿಂದೆ ರೋಟರಿಗೆ ಸೇರ್ಪಡೆಯಾಗಿದ್ದು ಜೊತೆ ಕಾರ್ಯದರ್ಶಿಯಾಗಿ, ಕಾರ್ಯಕ್ರಮ ನಿರೂಪಣೆ, ಪ್ರವಾಸ, ಕ್ರಿಕೆಟ್ ಕಬಡ್ಡಿ, ಹಾಗೂ ಇತರ ಕ್ರೀಡೆಗಳು ಇವರ ಹವ್ಯಾಸಗಳಾಗಿದ್ದು ಬೊಳ್ವಾರಿನ ಹೇಮಂತ್ ಪ್ಲಾಜಾದಲ್ಲಿ ಸ್ಟುಡಿಯೊ ಹೊಂದಿದ್ದು ಇತ್ತೀಚಿಗಷ್ಟೇ ಅವರು ಎಲ್ಇಡಿ ಪರದೆಯ ಹೊಸ ವ್ಯವಹಾರವನ್ನು ಪ್ರಾರಂಭಿಸಿರುತ್ತಾರೆ.
ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಜಯಂತ್ ಬಾಯಾರು ಪುತ್ತೂರು ತಾಲೂಕಿನ ಬಲ್ನಾಡು ಬಾಯಾರು ನಿವಾಸಿ. ಪ್ರತಿಷ್ಠಿತ ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷರಾಗಿ, ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಬಲ್ನಾಡು ಶ್ರೀಕೃಷ್ಣ ಜನ್ಮಾಷ್ಟಮಿ ಇದರ ದಶಮಾನೋತ್ಸವದ ಮಾಜಿ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ನಲ್ಲಿ ಸಾರ್ಜಂಟ್ ಎಟ್ ಆರ್ಮ್ಸ್ ಆಗಿ ಹೀಗೆ ಹಲವು ಸಂಘಟನೆಗಳಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿರುತ್ತಾರೆ. ಕೋರ್ಟ್ ರಸ್ತೆಯ ಪುತ್ತೂರು ಸೆಂಟರ್ ಇದರ ಮ್ಯಾನೇಜರ್ ಆಗಿ ಜೊತೆಗೆ ಕೃಷಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಜು.6: ಪದ ಪ್ರದಾನ..
ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜು.6 ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಂಗಣದಲ್ಲಿ ಸಂಜೆ ನೆರವೇರಲಿದ್ದು, ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3180 ಇದರ ಪಿಡಿಜಿ ಡಾ.ರವಿ ಅಪ್ಪಾಜಿರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ಪಿ.ರಾವ್, ರೋಟರಿ ವಲಯ ಸೇನಾನಿ ಭರತ್ ಪೈ, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ.ರವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.