ಪುತ್ತೂರು: ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘ ಕುಂಬ್ರ ಇದರ ವತಿಯಿಂದ ಕುಂಬ್ರ ತಂಗುದಾಣದಲ್ಲಿ ಬಾಡಿಗೆ ಮಾಡುವ ರಿಕ್ಷಾಗಳು ಕುಂಬ್ರದಿಂದ ವಿವಿಧ ಕಡೆಗಳಿಗೆ ಬಾಡಿಗೆ ಹೋದಾಗ ಪ್ರಯಾಣಿಕರಿಂದ ತೆಗೆದುಕೊಳ್ಳಬೇಕಾದ ಹೊಸ ಬಾಡಿಗೆ ದರವನ್ನು ನಿಗದಿಪಡಿಸಿದ್ದು ಅದನ್ನು ಸಂಘದ ಪದಾಧಿಕಾರಿಗಳು ಪ್ರಕಟಿಸಿದ್ದಾರೆ.

ಮಿನಿಮಂ ಚಾರ್ಜ್(1.5 ಕಿ.ಮೀ ಒಳಗಡೆ) 40 ರೂ. ನಿಗದಿಪಡಿಸಲಾಗಿದ್ದು ಕುಂಬ್ರದಿಂದ ವಿವಿಧ ಕಡೆಗಳಿಗೆ ಬಾಡಿಗೆ ನಿಗದಿಪಡಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆಟೋ ರಿಕ್ಷಾಗಳ ಇನ್ಸೂರೆನ್ಸ್, ಪೆಟ್ರೋಲ್, ಗ್ಯಾಸ್ ಹಾಗೂ ಬಿಡಿಭಾಗಗಳ ಬೆಲೆ ಹೆಚ್ಚಳದಿಂದ ಅನಿವಾರ್ಯವಾಗಿ ಹೊಸ ದರವನ್ನು ನಿಗದಿಪಡಿಸಬೇಕಾಗಿ ಬಂದಿದ್ದು ಮುಂದಕ್ಕೆ ಕುಂಬ್ರದಲ್ಲಿ ಬಾಡಿಗೆ ಮಾಡುವ ಎಲ್ಲಾ ರಿಕ್ಷಾಗಳಲ್ಲಿ ಪ್ರಯಾಣಿಕರಿಗೆ ಕಾಣಿಸುವಂತೆ ಪ್ರಯಾಣಿಕರ ದರ ಪಟ್ಟಿಯನ್ನು ಅಳವಡಿಸಲಾಗುವುದು ಎಂದು ಕುಂಬ್ರ ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಶ್ರಫ್ ಸಾರೆಪುಣಿ ತಿಳಿಸಿದ್ದಾರೆ. ನೂತನ ದರ ಪಟ್ಟಿ ಬಿಡುಗಡೆ ವೇಳೆ ಸಂಘದ ಪ್ರ.ಕಾರ್ಯದರ್ಶಿ ಉದಯ ಮಡಿವಾಳ, ಉಪಾಧ್ಯಕ್ಷ ಸುಧಾಕರ ಪಾಟಾಳಿ, ಸದಸ್ಯರಾದ ವಾಸು ಪೂಜಾರಿ, ಸುಂದರ ಗೌಡ, ಹರೀಶ್, ಇರ್ಷಾದ್, ಚಂದ್ರ ಪೂಜಾರಿ, ಇಲ್ಯಾಸ್, ರಾಜೇಶ್ ಹಾಗೂ ಇನ್ನಿತರ ಆಟೋ ಚಾಲಕರು ಉಪಸ್ಥಿತರಿದ್ದರು.