ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಬಿಜೆಪಿ ನಗರಸಭಾ ಸದಸ್ಯರ ಪುತ್ರನಿಂದ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯ ನಿಲುವು ಸ್ಪಷ್ಟ ಇದೆ, ನಾವು ಸಂತ್ರಸ್ತೆಯ ಪರವಾಗಿದ್ದೇವೆ. ಮುಂದಕ್ಕೂ ಪೂರ್ಣ ಪ್ರಮಾಣದಲ್ಲಿ ಇದ್ದೇವೆ. ಯುವತಿಯ ತಾಯಿಯ ಹೇಳಿಕೆಯ ಪರವಾಗಿದ್ದೇವೆ ಎಂದವರು ಹೇಳಿದರು.