ಪುತ್ತೂರು: ಮುಂಡೂರು ವಲಯ ಕಾಂಗ್ರೆಸ್ ವತಿಯಿಂದ ‘ಬಿಜೆಪಿ ಸುಳ್ಳಿಗೆ ಉತ್ತರ’ ಜನಜಾಗೃತಿ ಸಭೆ ನಡೆಯಿತು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಕಾಂಗ್ರೆಸ್ ವಕ್ತಾರೆ ಚಂದ್ರ ಪ್ರಭ ನೀರ್ಪಾಡಿ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಪ್ರ.ಕಾರ್ಯದರ್ಶಿ ರವಿ ಪ್ರಸಾದ್ ಶೆಟ್ಟಿ, ಪೂರ್ಣೇಶ್ ಭಂಡಾರಿ, ಶರೂನ್ ಸಿಕ್ವೇರಾ, ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷ ಕಮಲೇಶ್ ಎಸ್.ವಿ, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯಾಕೂಬ್ ಮುಲರ್, ಬೂತ್ ಅಧ್ಯಕ್ಷ ಇಬ್ರಾಹಿಂ ಮುಲಾರ್, ಪದ್ಮಯ್ಯ ಬಂಡಿಕಾನ, ಗಣೇಶ್ ಬಂಗೇರ, ಹಿರಿಯರಾದ ಇಸ್ಮಾಯಿಲ್ ಕೊಂಬಳ್ಳಿ, ಆದ್ರಮ ಹಾಜಿ ಮುಲಾರ್, ಮಹಮ್ಮದ್ ಮುಂಡೂರು ಹಾಗೂ ಅನೇಕ ಹಿರಿಯ, ಕಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ನೇತೃತ್ವದಲ್ಲಿ ಬಿಜೆಪಿ ಸದಸ್ಯರಾದ ವೆಲೇರಿಯನ್ ಡಿಸೋಜಾ ಪುಳಿಂಕೆತ್ತಡಿ ಹಾಗೂ ಅವಿನಾಶ್ ಕೊಡಂಕಿರಿ ಕಾಂಗ್ರೆಸ್ ಸೇರ್ಪಡೆಗೊಂಡರು. ಬಿಜೆಪಿಯಿಂದ ಇನ್ನಷ್ಟು ಮಂದಿ ಸದ್ಯದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ತಿಳಿಸಿದ್ದಾರೆ.