ಬಡಗನ್ನೂರುಃ ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ದಿವಂಗತ ಡಾ. ಕೆ. ಪಿ. ಬಾಲಕೃಷ್ಣ ರೈ ಮಧುವನ, ನೆಟ್ಟಣಿಗೆ ಇವರ ಸ್ಮರಣಾರ್ಥ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಮಧುವನ ಸಿಂಚನ 2025 ವಿಶೇಷ ಕಾರ್ಯಕ್ರಮ ಜು.2 ರಂದು ವಿದ್ಯಾಸಂಸ್ಥೆಗಳ ಸಭಾಭವನದಲ್ಲಿ ನಡೆಯಿ
ಕಾರ್ಯಕ್ರಮವನ್ನು ಬೆಳ್ಳೂರು ಸೇವಾ ಭಾರತಿ ಬ್ಯಾಂಕ್ ನೌಕರರಾದ ಜಯಾನಂದ ಕುಳ ರವರು ಉದ್ಘಾಟಿಸಿ ಶುಭ ಹಾರೖೆಸಿದದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮಂಗಳೂರು ವಕೀಲರಾದ ಬಾಲರಾಜ್ ರೈರವರು ಮಾತನಾಡಿ ನನ್ನ ತಂದೆಯವರಾದ ದಿವಂಗತ ಡಾ. ಕೆ.ಪಿ ಬಾಲಕೃಷ್ಣ ರೈ ಇವರ ಸ್ಮರಣಾರ್ಥ ಕಳೆದ 16 ವರ್ಷಗಳಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ತಮ್ಮ ಪ್ರಾಯೋಜಕತ್ವದಲ್ಲಿ ನಡೆಸಿ ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ತರುವಲ್ಲಿ ಶ್ರಮಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿ ಶುಭ ಹಾರೖೆಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುವ ಶ್ರೀನಿವಾಸ್ ಎಚ್ ಬಿ ರವರು ಮಾತನಾಡಿ ಈ ವರ್ಷ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸಾಧನೆಯನ್ನು ಮಾಡಿದಲ್ಲಿ ರೂಪಾಯಿ 5,000ವನ್ನು ನಗದು ಬಹುಮಾನವಾಗಿ ನೀಡುತ್ತೇನೆ ಅಲ್ಲದೆ ಈ ಕಾರ್ಯಕ್ರಮವು ಅತ್ಯಂತ ಅದ್ಭುತವಾಗಿ ಮೂಡಿ ಬಂದಿದೆ ಎಂದ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ದಯಾನಂದ ರೈ ಕೊರ್ಮಂಡ ಮಾತನಾಡಿ ಸಂಸ್ಥೆಯ ವಿದ್ಯಾರ್ಥಿಗಳು ಕಳೆದ ಮೂರು ಮೂರು ವರ್ಷಗಳಿಂದ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರು ಶೇಕಡ ಫಲಿತಾಂಶವನ್ನು ತರುವ ಜೊತೆಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅತ್ಯುತ್ತಮವಾದ ಸಾಧನೆ ಮಾಡುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳು ಪಟ್ಟಣ ಪ್ರದೇಶದ ಮಕ್ಕಳಿಂತ ಕಡಿಮೆ ಅಲ್ಲ ಎಂದು ತೋರಿಸಿ ಕೊಟ್ಟು ತಾಲೂಕಿನಲ್ಲಿಯೇ ಮಾದರಿ ವಿದ್ಯಾಸಂಸ್ಥೆಯನ್ನಾಗಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಪ್ರಾಯೋಜಕರಾದ ಬಾಲರಾಜ್ ರೈ ರವರು ವಿದ್ಯಾರ್ಥಿಗಳು ನಡೆಸಿದ ತುಳುನಾಡ ವೈಭವ ಪುರಾಣ ಕಥೆ ಹಾಗೂ ಪೋಷಕರ ಗೀತಾ ಗಾಯನ ಮುಂತಾದ ಸ್ಪರ್ಧೆಗಳು ಅತ್ಯುತ್ತಮವಾಗಿದ್ದು ಮುಂದೆಯೂ ಈ ರೀತಿಯ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಪ್ರೋತ್ಸಾಹದ ಮಾತುಗಳಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಿವರಾಮ್ ಎಚ್ ಡಿ ಸಂಚಾಲಕರಾದ ಮಹದೇವ ಭಟ್ ಎಸ್ ಕೊಳ್ಯ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರುಗಳಾದ ಆನಂದ ಪಾದೆಗದ್ದೆ ಹಾಗೂ ಅಬ್ದುಲ್ ಖಾದರ್ ಸುಳ್ಯ ಪದವು ಮತ್ತು ಸಂಸ್ಥೆಯ ನಿವೃತ್ತ ಶಿಕ್ಷಕರುಗಳು ಆಡಳಿತ ಮಂಡಳಿಯ ಸದಸ್ಯರುಗಳು ಪೋಷಕ ಬಂಧುಗಳು ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದರು.
ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಸುಖೇಶ್ ರೈ ಎನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಗೌರವ ಶಿಕ್ಷಕಿ ಸ್ವಾತಿ ವಂದಿಸಿದರು ಸಹ ಶಿಕ್ಷಕಿ ಪ್ರಶಾಂತಿ ರೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.
ಬಹುಮಾನ ವಿತರಣೆ
ಪೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಕೀರ್ತಿ ತಂಡ ಪ್ರಥಮ ಸ್ಥಾನ, ಹಾಗೂ ಜ್ಯೋತಿ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು.ಪ್ರಾಥಮಿಕ ಶಾಲಾ ವಿಭಾಗದಲ್ಲಿ ಚೇತನ, ಕ್ಷಿತಿ,, ಹಾಗೂ ಗಗನ್ ರಾಜ್ ಕಥೆ ಹೇಳುವುದರಲ್ಲಿ ಬಹುಮಾನ ಪಡೆದರು.ಪೋಷಕರ ವಿಭಾಗದಲ್ಲಿ ರಾಜೇಶ್ ರೂಪ ಹಾಗೂ ವಿಶಾಲಾಕ್ಷಿ ಬಹುಮಾನ ಪಡೆದುಕೊಂಡರು.