ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಶ್ರೀ ಲಕ್ಷ್ಮೀ ಪ್ರತಿಷ್ಠಾ ವರ್ಧಂತಿ ಉತ್ಸವದ ಅಂಗವಾಗಿ ಬೆಳಗ್ಗೆ ಶ್ರೀ ದೇವಿಗೆ ಕುಂಕುಮಾರ್ಚನೆ, ಮಧ್ಯಾಹ್ನ ಪೂಜೆ, ಸಂಜೆ ರಾಮನಾಮ ಜಪ ಅಭಿಯಾನ, ರಾತ್ರಿ ದೇವಾಲಯದ ಭಜನಾ ಮಂಡಳಿಯಿಂದ ವಿಶೇಷ ಭಜನಾ ಸೇವೆ, ಏಕಾಂತ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮೊಕ್ತೇಸರರಾದ ಬಿ. ಗಣೇಶ ಶೆಣೈ, ಮೊಕ್ತೇಸರರಾದ ಯು. ನಾಗರಾಜ ಭಟ್, ಡಾ. ರತ್ನಾಕರ ಶೆಣೈ, ಪಿ. ದೇವಿದಾಸ ಭಟ್, ಕೆ.ಅನಂತರಾಯ ಕಿಣಿ ಪ್ರಮುಖರಾದ ಉಜಿರೆ ಪ್ರಭಾತ್ ಭಟ್, ಕೆ. ಕೃಷ್ಣ ಭಟ್, ಪಿ. ಪ್ರಸಾದ್ ಶೆಣೈ, ಎನ್. ಸುರೇಶ್ ಪೈ, ವೈ ಅನಂತ ಶೆಣೈ, ಪಿ. ಹರೀಶ ಪೈ, ಎಚ್. ರಾಘವೇಂದ್ರ ಪ್ರಭು, ಕರಾಯ ರಾಘವೇಂದ್ರ ನಾಯಕ್, ಯು. ರಾಜೇಶ ಪೈ, ಕೆ. ದಾಮೋದರ ಪ್ರಭು, ಎಂ. ಸತ್ಯಪ್ರಸಾದ್ ಭಟ್ ಲಕ್ಷ್ಮೀನಗರ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಅರ್ಚಕರಾದ ರವೀಂದ್ರ ಭಟ್, ಶ್ರೀಧರ ಭಟ್, ಸಂದೀಪ್ ಭಟ್ ಧಾರ್ಮಿಕ ವಿಧಿವಿಧಾನ ನಡೆಸಿಕೊಟ್ಟರು. ದೇವಾಲಯದ ವ್ಯವಸ್ಥಾಪಕ ಕೆ. ರಾಮಕೃಷ್ಣ ಪ್ರಭು, ಕೆ. ಮಂಜುನಾಥ ನಾಯಕ್ ಸಹಕರಿಸಿದರು.