ಕಾಣಿಯೂರು ವಲಯದ ಕರ್ನಾಟಕ ಟೈಲರ್ ಅಸೊಸಿಯೇಶನ್ ನ ಮಹಾಸಭೆ- ಪದಾಧಿಕಾರಿಗಳ ಆಯ್ಕೆ

0

ಎಸ್.ಎಸ್.ಎಲ್.ಸಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ಹನ್ಸಿಕಾರಿಗೆ ಸನ್ಮಾನ

ಕಾಣಿಯೂರು: ಕರ್ನಾಟಕ ಟೈಲರ್ ಅಸೋಸಿಯೇಶನ್ ಕಾಣಿಯೂರು ವಲಯದ ಮಹಾಸಭೆಯು ಕಾಣಿಯೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜು.3ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಣಿಯೂರು ವಲಯ ಸಮಿತಿ ಅಧ್ಯಕ್ಷೆ ಜಯಶ್ರೀ ಪುರುಷೋತ್ತಮ್ ಕಂಡೂರು ಮಾತನಾಡಿ, ಸಂಘದಿಂದ ವಿವಿಧ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘದ ಬೆಳವಣಿಗೆಯಲ್ಲಿ ಎಲ್ಲ ಸದಸ್ಯರ ಸಹಕಾರ ಅಗತ್ಯ. ಅಧ್ಯಕ್ಷೆಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ಸಂಘದ ಹಿರಿಯ ಸದಸ್ಯ ಗಂಗಾಧರ ಗೌಡ ಅಗಳಿ ಅವರು ಉದ್ಘಾಟಿಸಿ ಶುಭಹಾರೈಸಿದರು.

ಕರ್ನಾಟಕ ಟೈಲರ್ ಅಸೋಸಿಯೇಶನ್ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಜಯಂತ ಉರ್ಲಾಂಡಿ ಮಾತನಾಡಿ, ಕರ್ನಾಟಕ ಟೈಲರ್ ಅಸೋಸಿಯೇಶನ್ ಸಂಘಟನೆಯನ್ನು ಇನ್ನೂ ಬಲಿಷ್ಠವಾಗಿ ಬೆಳೆಯಬೇಕು. ಸರಕಾರದಿಂದ ಸಿಗುವಂತಹ ಸೌಲಭ್ಯಗಳು ಸಂಘಕ್ಕೆ ಸಿಗುವ ಹಾಗೇ ಪ್ರಯತ್ನಿಸಬೇಕು ಎಂದು ಹೇಳಿದರು. ಕರ್ನಾಟಕ ಟೈಲರ್ ಅಸೋಸಿಯೇಶನ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಯರಾಮ ಬಿ.ಎನ್ ಮಾತನಾಡಿ, ನೂತನ ಪದಾಧಿಕಾರಿಗಳ ಮುಖಾಂತರ ಸಂಘವನ್ನು ಇನ್ನಷ್ಟು ಬಲಪಡಿಸಬೇಕು ಎಂದರು. ಕರ್ನಾಟಕ ಟೈಲರ್ ಅಶೋಸಿಯೇಶನ್ ಕ್ಷೇತ್ರ ಸಮಿತಿ ಅಧ್ಯಕ್ಷೆ ಉಮಾ ನಾಯಕ್ ಅವರು ನೂತನ ಪದಾಧಿಕಾರಿಗಳ ಆಯ್ಕೆ ನಡೆಸಿಕೊಟ್ಟರು. ಪುತ್ತೂರು ನಗರ ವಲಯ ಅಧ್ಯಕ್ಷೆ ಗುಲಾಬಿ ಉಪಸ್ಥಿತರಿದ್ದರು.

ಶಕುಂತಲಾ ರೈ, ಗೀತಾ ಕೋಲ್ಪೆ ಪ್ರಾರ್ಥಿಸಿದರು. ಸುಮಲತಾ ಸುಂದರ ದೇವಸ್ಯ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಯಶವಂತ ಕೇಪುಳಗುಡ್ಡೆ ಲೆಕ್ಕಪತ್ರ ಮಂಡಿಸಿದರು. ಕರ್ನಾಟಕ ಟೈಲರ್ ಅಶೋಸಿಯೇಶನ್ ಕ್ಷೇತ್ರ ಸಮಿತಿ ಕೋಶಾಧಿಕಾರಿ ಪರಮೇಶ್ವರ ಅನಿಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾಣಿಯೂರು ವಲಯ ಅಧ್ಯಕ್ಷೆ ಜಯಶ್ರೀ ಪುರುಷೋತ್ತಮ ಕಂಡೂರು ವಂದಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ:

ಈ ಸಂದರ್ಭದಲ್ಲಿ ಕರ್ನಾಟಕ ಟೈಲರ್ ಅಸೋಸಿಯೇಶನ್ ಕಾಣಿಯೂರು ವಲಯದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಶ್ಮಿ ಮುರಳಿ ಕುದ್ವ ಅಗಳಿ, ಪ್ರಧಾನ ಕಾರ್ಯದರ್ಶಿಯಾಗಿ ಸುಮಲತಾ ಸುಂದರ ದೇವಸ್ಯ , ಕೋಶಾಧಿಕಾರಿಯಾಗಿ ಶಿವಪ್ಪ ಬಂಡಾಜೆ, ಉಪಾಧ್ಯಕ್ಷರಾಗಿ ರಾಧಾ ಬರೆಪ್ಪಾಡಿ, ಜತೆ ಕಾರ್ಯದರ್ಶಿಯಾಗಿ ಶಕುಂತಲಾ ರೈ
ಆಯ್ಕೆಮಾಡಲಾಯಿತು. ಹಾಗೂ ವಲಯದಿಂದ ಪುತ್ತೂರು ಕ್ಷೇತ್ರ ಸಮಿತಿಗೆ ಪರಮೇಶ್ವರ ಅನಿಲ, ಜಯಶ್ರೀ ಪುರುಷೋತ್ತಮ ಕಂಡೂರು, ರಮೇಶ್ ಸುವರ್ಣ ಅಬೀರ, ಅರುಣಾ ಎಂ.ಶೆಟ್ಟಿ, ರಾಧಾಕೃಷ್ಣ ರೈ ಪಟ್ಟೆ, ಭವ್ಯ ಯತೀಶ್ ನಡುಮನೆ ಪೈಕ, ಸೀಮಾ ಸುದರ್ಶನ್ ಮಾದೋಡಿ ಇವರನ್ನು ಆಯ್ಕೆ ಮಾಡಲಾಯಿತು.

2024-25ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 624ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಹನ್ಸಿಕಾ ಅವರು ಸನ್ಮಾನ ಪಾತ್ರರಾಗಿದ್ದು, ಹನ್ಸಿಕಾ ತಾಯಿ ಕರ್ನಾಟಕ ಟೈಲರ್ ಅಸೋಸಿಯೇಶನ್ ಕಾಣಿಯೂರು ವಲಯದ ಸಮಿತಿ ಸದಸ್ಯೆ ಆಗಿರುವ ವೈಶಾಲಿ ಅವರು ಸನ್ಮಾನ ಸ್ವೀಕರಿಸಿದರು.

LEAVE A REPLY

Please enter your comment!
Please enter your name here