ಪ್ರವೀಣ ಕುಮಾರಿ ಎಂ.ಕೆ ಇವರಿಗೆ ಪಿ.ಎಚ್.ಡಿ ಪದವಿ ಪ್ರದಾನ

0

ಪುತ್ತೂರು: ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎಂ.ಸಿ.ಎ ವಿಭಾಗದ ಸಹಪ್ರಾಧ್ಯಾಪಿಕೆಯಾಗಿರುವ ಪ್ರವೀಣ ಕುಮಾರಿ ಯಂ.ಕೆ. ಇವರಿಗೆ ಪಿ.ಎಚ್.ಡಿ ಪದವಿ ಲಭಿಸಿದೆ.

ಇವರು ಮಂಗಳೂರು ವಿಶ್ವವಿದ್ಯಾನಿಲಯ ಇಲ್ಲಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಚೇರ್ಮನ್ ಹಾಗೂ ಸೀನಿಯರ್ ಪ್ರೊಫೆಸರ್ ಆಗಿರುವ ಡಾ| ಮಂಜಯ್ಯ ಡಿ. ಎಚ್. ಅವರ ಮಾರ್ಗದರ್ಶನದಲ್ಲಿ ಮಂಡಿಸಿರುವ “Advanced Data Analytics Model for Intelligent Transport System in Smart City” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಎಚ್.ಡಿ. ಪದವಿ ಪ್ರದಾನ ಮಾಡಿದೆ.


ಪ್ರವೀಣ ಕುಮಾರಿ ಯಂ.ಕೆ. ಇವರು ಪುತ್ತೂರು ಕೃಷ್ಣನಗರ ನಿವಾಸಿ , ನಿವೃತ್ತ P.S.I ಪಿ. ಎಮ್. ಕೃಷ್ಣ ನಾಯ್ಕ್ ಹಾಗೂ ಯಶೋದಾ ಕೃಷ್ಣ ಇವರ ಪುತ್ರಿ. ಇವರ ಪತಿ ನಾರಾಯಣ ಬಡೆಕ್ಕಿಲ ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕಿನ ಪ್ರಧಾನ ಕಛೇರಿಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here