ಪುತ್ತೂರು; ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ ಡಾ.ಮುರಳೀಧರ್ ರೈರವರನ್ನು ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ವತಿಯಿಂದ ಸನ್ಮಾನಿಸುವ ಮೂಲಕ ಇತ್ತೀಚೆಗೆ “ಡಾಕ್ಟರ್ಸ್ ಡೇ” ಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಪೂರ್ವಾದ್ಯಕ್ಷರಾದ ಭಾಸ್ಕರ ಕೋಡಿಂಬಾಳರವರು, ಡಾ. ಮುರಳೀಧರ್ ರೈಯವರು ಗ್ರಾಮೀಣ ಪ್ರದೇಶದಲ್ಲಿ ಸೇವೆಯನ್ನು ಮಾಡುವ ಮೂಲಕ ಹಲವಾರು ಬಡವರ ಸೇವೆಯನ್ನು ಮಾಡುತ್ತಿದ್ದಾರೆ. ರೋಗ ಲಕ್ಷಣಗಳನ್ನು ನೋಡಿ ನಗುಮುಖದಿಂದ ಬಡವರಿಗೆ ನೀಡುವ ಔಷಧ ರೋಗ ನಿವಾರಣೆಯೊಂದಿಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಅದರಲ್ಲಿಯೂ ಇವರ ಗ್ರಾಮೀಣ ವೈದ್ಯಕೀಯ ಸೇವೆ ಶ್ಲಾಘನೀಯ ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷರಾದ ಸುರೇಶ್ ಪಿ.ರವರು ಮಾತನಾಡಿ, ಬಡ ಜನರ ಸೇವೆಯನ್ನು ಮಾಡುತ್ತಿರುವ ಡಾ.ಮುರಳೀಧರ್ ರೈ ಅವರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಸನ್ಮಾನವನ್ನು ಸ್ವೀಕರಿಸಿದ ಡಾ. ಮುರಳೀಧರ್ ರೈರವರು ರೋಟರಿ ಸಂಸ್ಥೆಯು ವಿಶೇಷವಾಗಿ ಮಾನವೀಯ ಸೇವೆಯನ್ನು ಮಾಡುತ್ತಿದ್ದು ವಿಶ್ವದಲ್ಲಿ ಪೋಲಿಯೋ ನಿರ್ಮೂಲನೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದೆ. ಅಲ್ಲದೆ ಸಾರ್ವಜನಿಕರಿಗೆ ಸಿಗುತ್ತಿರುವ ಬ್ಲಡ್ ಬ್ಯಾಂಕ್ ಸೇವೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಗುತ್ತಿರುವ ಡಯಾಲಿಸಿಸ್ ಸೇವೆ ಇತ್ಯಾದಿಗಳು ಸಾರ್ವಜನಿಕರಿಗೆ ರೋಟರಿಯಿಂದ ಸಿಗುತ್ತಿರುವ ಮಾನವೀಯ ಸೇವೆಗಳಾಗಿದ್ದು ಇಂತಹ ಸಂದರ್ಭದಲ್ಲಿ ನನ್ನ ಸೇವೆಯನ್ನು ಗುರುತಿಸಿ ನನ್ನನ್ನು ಅಭಿನಂದಿಸಿರುವುದಕ್ಕೆ ರೋಟರಿ ಸ್ವರ್ಣ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ರೋಟರಿ ಕ್ಲಬ್ ಪುತ್ತೂರು ಸ್ವರ್ಣ ನೂತನ ಅಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ ಮಾತನಾಡಿ, ಪುತ್ತೂರಿನ ಕುಂಬ್ರ ಪರಿಸರದಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವ ವೈದ್ಯಕೀಯ ಸೇವೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಈ ಸಂದರ್ಭದಲ್ಲಿ ಪೂರ್ವಧ್ಯಕ್ಷರಾದ ಸುಂದರ ರೈ ಬಲ್ಕಾಡಿ, ಕ್ಲಬ್ ಕಾರ್ಯದರ್ಶಿ ಪ್ರವೀಣ್ ರೈ ಸಾಂತ್ಯ, ಕ್ಲಬ್ ಸಾರ್ಜಂಟ್ ಎಟ್ ಆಮ್ಸ್೯ ರಾಮಣ್ಣ ರೈ ಹಾಗೂ ಡಾ.ಮುರಳೀಧರ್ ರೈಯವರ ಕುಟುಂಬಿಕರು ಹಾಜರಿದ್ದರು.