ನಾಳೆ(ಜು.6) ಕುಂಬ್ರದಲ್ಲಿ ಸ್ಪಂದನಾ ಸೇವಾ ಬಳಗದಿಂದ ‘ಸುಜ್ಞಾನ ದೀಪಿಕೆ’ ವಿತರಣಾ ಕಾರ್ಯಕ್ರಮ

0

ಪುತ್ತೂರು: ಸ್ಪಂದನಾ ಸೇವಾ ಬಳಗ ಕುಂಬ್ರ ಇದರ ವತಿಯಿಂದ ಧರ್ಮ ಜಾಗೃತಿಗಾಗಿ ಸನಾತನ ಹಿಂದೂ ಧರ್ಮದ ಆಚಾರ, ವಿಚಾರ, ನಂಬಿಕೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ‘ನಂಬಿಕೆಗಳು ಮತ್ತು ಅದರ ಅರ್ಥ ವಿವರಣೆಯ’ ಮೌಲ್ಯಮಾಪನ ಉದ್ದೇಶ ಹೊಂದಿರುವ ಗ್ರಂಥ ‘ ಸುಜ್ಞಾನ ದೀಪಿಕೆ’ ವಿತರಣಾ ಕಾರ್ಯಕ್ರಮ ಜು.6 ರಂದು ಬೆಳಿಗ್ಗೆ ಕುಂಬ್ರ ಶ್ರೀರಾಮ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಲಿದೆ.

ಇದರಲ್ಲಿ ಕೆದಂಬಾಡಿ, ಅರಿಯಡ್ಕ ಮತ್ತು ಒಳಮೊಗ್ರು ಗ್ರಾಮದ ಹಿಂದೂ ಬಂಧುಗಳಿಗೆ ಹಾಗೂ ಮಕ್ಕಳಿಗೆ ಪುಸ್ತಕ ವಿತರಣೆ ನಡೆಯಲಿದ್ದು ಪುಸ್ತಕ ಪಡೆದು ಪರೀಕ್ಷೆಯಲ್ಲಿ ಭಾಗವಹಿಸುವ ಅವಕಾಶ ಮತ್ತು ಪರೀಕ್ಷೆಯಲ್ಲಿ ಭಾಗವಹಿಸಿದವರಿಗೆ ಧರ್ಮ ಶಿಕ್ಷಣ ಪ್ರಮಾಣ ಪತ್ರ ನೀಡಲಾಗುತ್ತದೆ. ಅಧಿಕ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.9611695408 ಅಥವಾ 9449773818 ಗೆ ಸಂಪರ್ಕಿಸಬಹುದು ಎಂದು ಸ್ಪಂದನಾ ಸೇವಾ ಬಳಗದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here