ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆಯ್ಯೂರು ಗ್ರಾಮದ ಭಕ್ತ ಸಮಿತಿ ರಚನೆ

0

ಕೆಯ್ಯೂರು: ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆಯ್ಯೂರು ಗ್ರಾಮದ ಭಕ್ತ ಸಮಿತಿ ರಚನೆಯು ಜು.4ರಂದು ದೇವಾಲಯದ ಸಭಾಭವನದಲ್ಲಿ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎ. ಕೆ ಜಯರಾಮ ರೈ ಕೆಯ್ಯೂರು ಅಧ್ಯಕ್ಷತೆಯಲ್ಲಿ ನಡೆಯಿತು.

ಕೆಯ್ಯೂರು ಗ್ರಾಮದ ಭಕ್ತಿ ಸಮಿತಿಯ ಗೌರವಾಧ್ಯಕ್ಷರಾಗಿ ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಅನಿಲೆ ತರವಾಡು ಟ್ರಸ್ಟ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಎ.ಕೆ ಜಯರಾಮ ರೈ ಕೆಯ್ಯೂರು ಹಾಗೂ ಕೆಯ್ಯೂರು ಗ್ರಾಮದ ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ, ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ, ಕುರಿಯ ಏಳ್ನಾಡುಗುತ್ತು ಮನೆತನದ ತರವಾಡು ಮನೆಯ ದೈವಗಳ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಎಸ್. ಬಿ. ಜಯರಾಮ ರೈ ಬಳಜ್ಜರವರನ್ನು ಆಯ್ಕೆ ಮಾಡಲಾಯಿತು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಕೆಯ್ಯೂರು ಗ್ರಾಮದ ದೇರ್ಲ ಶ್ರೀ ಲಕ್ಷ್ಮೀ ವೆಂಕಟರಮಣ ಮಠದ ಸಂಚಾಲಕ ಶಿವಶ್ರೀ ರಂಜನ್ ರೈ ದೇರ್ಲರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಾಸುಕಿ ಶಾಮಿಯಾನದ ಮಾಲಕ ಕೆ.ಎಸ್. ದಿನೇಶ್ ಕುಮಾರ್ ರವರನ್ನು ,ಪ್ರದಾನ ಕಾರ್ಯದರ್ಶಿಗಳಾಗಿ ಸುದ್ದಿ ಬಿಡುಗಡೆ ದಿನ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜೇಶ್ ಯಂ.ಎಸ್ ಮಾಡಾವು ಸಂಪಾಜೆ ಹಾಗೂ ಖಜಾಂಚಿಯಾಗಿ ಶ್ರೀ ರಾಮಕೃಷ್ಣ ಭಟ್ ಮೇರ್ಲ ರವರನ್ನು ಆಯ್ಕೆ ಮಾಡಲಾಯಿತು.


ಸಮಿತಿ ಸದಸ್ಯರುಗಳಾಗಿ ಬಾಲಕೃಷ್ಣ ರೈ ಮಾಡಾವು, ಮಾಧವ ಪೂಜಾರಿ ಕೆಂಗುಡೇಲು, ಕೃಷ್ಣಪ್ರಸಾದ್ ರೈ ಕಣಿಯಾರು, ರಾಧಾಕೃಷ್ಣ ಗೌಡ ಕೆಯ್ಯೂರು,ಶರತ್ ರೈ ದೇರ್ಲ,ಡಾ| ಹರ್ಷ ಕುಮಾರ್ ರೈ ಮಾಡಾವು, ಸುಜಯ ಕೆಯ್ಯೂರು, ಸುಶೀಲ ರೈ ಕೆಯ್ಯೂರು, ಮಮತಾ ರೈ ಕೆಯ್ಯೂರು, ಸುಮಿತ್ರಾ ದಿವಾಕರ್ ಪಲ್ಲತ್ತಡ್ಕರವರನ್ನು ಆಯ್ಕೆ ಮಾಡಲಾಯಿತು.ಉಳಿದಂತೆ ಸುಮಾರು 40 ಮಂದಿ ಸದಸ್ಯರ ಪಟ್ಟಿಯನ್ನು ಮಂಡಿಸಲಾಯಿತು.

ವೇದಿಕೆಯಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಸದಸ್ಯರಾದ ಸುಭಾಷ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ಈಶ್ವರ್ ಬೆಡೇಕರ್, ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಶೋಕ್ ರೈ ದೇರ್ಲ, ದಾಮೋದರ ಪೂಜಾರಿ ಕೆಂಗುಡೇಲು, ಚಂದ್ರಶೇಖರ ಪೂಜಾರಿ ಕಣಿಯಾರು, ಹರಿನಾಥ ಇಳಂತಾಜೆ, ಉಮಾಕಾಂತ್ ಬೈಲಾಡಿ, ಜಲಜಾಕ್ಷಿ ಎ ರೈ ಸೊರಕ್ಕೆ, ಸುಜಾಯ ಪೂಜಾರಿ ಕೆಯ್ಯೂರು ಮತ್ತು ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಚೆನ್ನಪ್ಪ ರೈ ದೇರ್ಲ ಹಾಗೂ ಎಸ್. ಬಿ. ಜಯರಾಮ ರೈ ಬಳಜ್ಜರವರು ಉಪಸ್ಥಿತರಿದ್ದರು. ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರು, ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಭಕ್ತ ಸಮಿತಿಯ ಪದಾಧಿಕಾರಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರ ಪ್ರಸಾದ ಮತ್ತು ಶಲ್ಯ ತೊಡಿಸಿ ಗೌರವಿಸಿದರು.

ನಮ್ಮವರೆಂಬ ಭಾವನೆ ಮೂಡಿದಾಗ ಕಾರ್ಯಕ್ಕೆ ಯಶಸ್ಸು – ಈಶ್ವರ ಭಟ್ ಪಂಜಿಗುಡ್ಡೆ
ಧಾರ್ಮಿಕ ಕ್ಷೇತ್ರದ ಅಭಿವೃದ್ದಿಯಲ್ಲಿ ಭಕ್ತರ ಸಹಕಾರ ಅಗತ್ಯ. ಇಂತಹ ಸಂದರ್ಭದಲ್ಲಿ ಎಲ್ಲಾರೂ ನಮ್ಮವರೆಂಬ ಭಾವನೆ ಮೂಡಬೇಕು. ಆ ರೀತಿಯ ಯೋಚನೆಯಡಿಯಲ್ಲಿ‌ ಕೆಲಸ ಮಾಡಿದಾಗ ದೇವಳದ ಅಭಿವೃದ್ದಿಗೆ ಯಶಸ್ಸು ಸಿಗಲಿದೆ. ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿ ಕಾರ್ಯ ಶಾಸಕ ಅಶೋಕ್ ರೈ ಅವರ ಮಾರ್ಗದರ್ಶನದಂತೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮ ಸಮಿತಿಯ ಮೂಲಕ ಭಕ್ತರ ಸಹಕಾರವೂ ಅಗತ್ಯವಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ 4 ಗ್ರಾಮಸಮಿತಿ ರಚನೆಯಾಗಿದ್ದು ಸಮಿತಿಯಲ್ಲಿ 460 ಮಂದಿ ಸದಸ್ಯರು ಸೇರಿಕೊಂಡಿದ್ದಾರೆ. ಸುಮಾರು 10 ಸಾವಿರ ಕ್ಕೂ ಅಧಿಕ ಮಂದಿ ಸದಸ್ಯರನ್ನಾಗಿ ಮಾಡುವ ಗುರಿ ಇಟ್ಡುಕೊಂಡಿದ್ದೇವೆ ಎಂದ ಅವರು ಎಲ್ಲರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here