ಕೆಯ್ಯೂರು: 2024- 25 ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ನಡೆಸಿದ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಕೆ ಪಿ ಎಸ್ ಕೆಯ್ಯೂರಿನ ಮೂವರು ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ಒಂಭತ್ತನೇ ತರಗತಿಯಿಂದ 12ನೇ ತರಗತಿಯವರೆಗೆ ವಾರ್ಷಿಕ ತಲಾ 12 ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನ ಲಭಿಸಲಿದೆ ಎಂದು ಶಾಲಾ ಉಪ ಪ್ರಾಂಶುಪಾಲರಾದ ವಿನೋದ್ ಕುಮಾರ್ ಕೆಎಸ್ ತಿಳಿಸಿದ್ದಾರೆ. ಪೂಜಾಶ್ರೀ ಡಿ, ಸಿಂಧೂರ ಎಸ್ ಹಾಗೂ ಕೃತಿಕಾ ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾದ ಪ್ರತಿಭಾವಂತ ವಿದ್ಯಾರ್ಥಿಗಳು. ಇವರಿಗೆ ಗಣಿತ ಶಿಕ್ಷಕರಾದ ಚಂದ್ರಶೇಖರ ಗೌಡ ಇವರು ತರಬೇತಿ ನೀಡಿದ್ದರು.