ಪೆರ್ನೆ: ಪೆರ್ನೆ ನಿವಾಸಿ ಇಸ್ಮಾಯಿಲ್ ರವರ ಪುತ್ರ ಇಯಾಝ್ ರವರು ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಶಾಸಕ ಅಶೋಕ್ ರೈ ಅವರು ಇಯಾಝ್ ರವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು ಟಿ ತೌಸೀಫ್,ಪೆರ್ನೆ ಉಸ್ತುವಾರಿ ವಿಕ್ರಂ ಶೆಟ್ಟಿ, ಪೆರ್ನೆ ಗ್ರಾಪಂ ಅಧ್ಯಕ್ಷೆ ವಿಜಯ, ಯುವ ಕಾಂಗ್ರೆಸ್ ಪುತ್ತೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಫಾರೂಕ್ ಪೆರ್ನೆ, ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಗ್ರಾಪಂ ಉಪಾಧ್ಯಕ್ಷೆ ಭಾರತಿ, ಸದಸ್ಯರುಗಳಾದ ವನಿತಾ, ನಳಿನಿ, ತನಿಯಪ್ಪ ಪೂಜಾರಿ, ಸುನಿಲ್ ಪಿಂಟೋ,ಅಬ್ದುಲ್ ರಝಾಕ್ ಉಪಸ್ಥಿತರಿದ್ದರು
