ಪೆರ್ನೆ:ಕಾಂಗ್ರೆಸ್ ಜನ ಜಾಗೃತಿ ಸಭೆ

0

ಉಳುವವನೇ ಭೂಮಿಯ ಒಡೆಯ ಕಾನೂನಿಂದ ಭೂಮಿ ಕಳೆದವರು ಕಾಂಗ್ರೆಸ್ ನಲ್ಲೇ ಇದ್ದಾರೆ ,ಲಾಭ ಮಾಡಿದವರು ಬೇರೆ ಪಕ್ಷದಲ್ಲಿದ್ದಾರೆ: ಶಾಸಕ ಅಶೋಕ್ ರೈ

ಪುತ್ತೂರು: ಈ ದೇಶದಲ್ಲಿ ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿ ಮಾಡಿದ್ದು ಕಾಂಗ್ರೆಸ್ ಈ ಕಾನೂನಿನಿಂದ ಭೂಮಿ ಕಳೆದುಕೊಂಡವರು ಈಗಲೂ ಕಾಂಗ್ರೆಸ್ ನಲ್ಲಿದ್ದಾರೆ ಆದರೆ ಭೂಮಿ ಪಡೆದು ಲಾಭ ಮಾಡಿದವರು ಬೇರೆ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಇದು ಯಾವ ನ್ಯಾಯ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಪೆರ್ನೆ ಜಂಕ್ಷನ್‌ನಲ್ಲಿ ಬಿಜೆಪಿ ಸುಳ್ಳುಗಳಿಗೆ ಕಾಂಗ್ರೆಸ್ ಉತ್ತರ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದರು.


ಕಾಂಗ್ರೆಸ್ ಸರಕಾರ ಯಾವುದೇ ಯೋಜನೆ ತಂದರೂ ಅದರ ಬಹುಪಾಲು ಲಾಭ ಪಡೆಯುವ ಬಿಜೆಪಿ ಬಳಿಕ ಕಾಂಗ್ರೆಸ್ ವಿರುದ್ದ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು. ಪಂಚ ಗ್ಯಾರಂಟಿ ಯೋಜನೆಯ ಲಾಭ ಬಿಜೆಪಿಯ ತಾಯಂದಿರಿಗೂ ನೀಡಿದ್ದೇವೆ ಮುಂದಿನ ಚುನಾವಣೆಯಲ್ಲಿ ಆತ್ಮ ಸಾಕ್ಷಿಯಾಗಿ ಮತ ಚಲಾಯಿಸಬೇಕು ಎಂದು ಹೇಳಿದರು.

ಎಕ್ರೆಗೆ ಎರಡು ಲಕ್ಷ ನುಂಗಿದ್ದಾರೆ:
ಬಿಜೆಪಿ ಶಾಸಕರಿರುವಾಗ ಅಕ್ರಮ ಸಕ್ರಮದಲ್ಲಿ ಎಕ್ರೆಗೆ ಎರಡು ಲಕ್ಷ ನುಂಗಿದ್ದಾರೆ. ಹಣ ಪಡೆದುಕೊಂಡರೂ ಕೆಲವರದ್ದು ಅಕ್ರಮ ಸಕ್ರಮ ಮಾಡಿಯೇ ಇಲ್ಲ. ಈಗ ನಮ್ಮ ಮೇಲೆ ಗೂಬೆ ಕೂರಿಸಿ, ಸುಳ್ಳು ಹೇಳುತ್ತಾ ಅಕ್ರಮ ಸಕ್ರಮ ಮಾಡುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಕದ ಕ್ಷೇತ್ರದಲ್ಲಿ ಈಗ ಬಿಜೆಪಿ ಶಾಸಕರಿದ್ದಾರೆ ಅಲ್ಲಿ ಎಷ್ಟು ಅಕ್ರಮ ಸಕ್ರಮ ಈ ಬಾಕಿ ಆಗಿದೆ ಎಂಬುದನ್ನು ಬಿಜೆಪಿಯವರು ಪರಿಶೀಲನೆ ಮಾಡಲಿ ಎಂದರು.

9/11 ಸಮಸ್ಯೆಗೆ ಬಿಜೆಪಿ ನೇರ ಹೊಣೆ:
ಗ್ರಾ.ಪಂ ನಲ್ಲಿ ನಡೆಯುತ್ತಿದ್ದ 9/11 ಖಾತಾ ವನ್ನು ಪುಡಾಕ್ಕೆ ಶಿಫ್ಟ್ ಮಾಡಿದ್ದು ಬಿಜೆಪಿ ಸರಕಾರವಿದ್ದಾಗ. ಅವರ ಅವಧಿಯಲ್ಲಿ ಯಾರೋ ಒಬ್ಬ ಕೋರ್ಟಿಗೆ ಹೋಗಿದ್ದ ಆ ಕಾರಣಕ್ಕೆ ಬಿಜೆಪಿ ಸರಕಾರ ಖಾತಾವನ್ನು ಪುಡಾ ಗೆ ವರ್ಗಾವಣೆ ಮಾಡಿತ್ತು .ಈಗ ಬಿಜೆಪಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಇದು ಅವರ ಮಹಾ ಸುಳ್ಳುಗಳಲ್ಲಿ ಒಂದಾಗಿದೆ ಎಂದು ಶಾಸಕರು ಹೇಳಿದರು.

2000 ಮಂದಿಗೆ ಏಕಕಾಲದಲ್ಲಿ ನಿವೇಶನ:
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಏಕಕಾಲದಲ್ಲಿ 2000 ನಿವೇಶನವನ್ನು ಹಂಚುವ ಕೆಲಸ ಮಾಡಲಿದ್ದೇವೆ. ನಿವೇಶನ ಕೊಟ್ಟಿಲ್ಲ ಎನ್ನುವ ಬಿಜೆಪಿಗರು ಅವರ ಶಾಸಕರ ಅವಧಿಯಲ್ಲಿ ಕನಿಷ್ಟ ಹಿರೆಬಂಡಾಡಿಯ ಬಡವರಿಗೆ ನಿವೇಶನ ಕೊಟ್ಟಿದ್ದಾರ? ಎಂಬುದನ್ನು ಬಹಿರಂಗಪಡಿಸಬೇಕು ಎಂದು‌ ಶಾಸಕರು ಸವಾಲು ಹಾಕಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 30 ಸೀಟು
ಪಂಚ ಗ್ಯಾರಂಟಿ ರಾಜ್ಯದಲ್ಲಿ ಬಿಜೆಪಿಯನ್ನು ದೂಳೀಪಟ ಮಾಡಲಿದ್ದು, 2028 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 30 ಸೀಟು ಮಾತ್ರ ಗಳಿಸಲಿದೆ. ಕಾಂಗ್ರೆಸ್ ಮುಂದಿನ 25 ವರ್ಷಗಳ ರಾಜ್ಯದಲ್ಲಿ ಆಡಳಿತ ನಡೆಸಲಿದೆ. ಗೃಹಲಕ್ಷ್ಮಿ ಮೊತ್ತ 2000 ದಿಂದ 5000 ಕ್ಕೆ ಏರಿಕೆಯಾಗಲಿದೆ. ಕಾಂಗ್ರೆಸ್ ರಾಜ್ಯ ,ದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.

ಬಡವರ ಪರ ಇರುವುದು ಕಾಂಗ್ರೆಸ್ ಮಾತ್ರ:
ದೇಶದಲ್ಲಿ ,ರಾಜ್ಯದಲ್ಲಿ ಕಾಂಗ್ರೆಸ್ ಮಾತ್ರ ಬಡವರ ಪರ ಇದೆ,ಬಿಜೆಪಿ‌ ಶ್ರೀಮಂತರ ಪರವಾಗಿದೆ ,ಕಾಂಗ್ರೆಸ್ ಆಡಳಿತ ಇರುವ ರಾಜ್ಯದಲ್ಲಿ ಜನ ನೆಮ್ಮದಿಯಿಂದ ಇದ್ದಾರೆ ಎಂದು ಕೆಪಿಸಿಸಿ ಪ್ರಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಹೇಳಿದರು.
ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆಯವರು ಪಂಚ ಗ್ಯಾರಂಟಿ ಲೆಕ್ಕವನ್ನು ಸಭೆಯಲ್ಲಿ‌ ಮಂಡಿಸಿದರು.‌

ವೇದಿಕೆಯಲ್ಲಿ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಣ ಯು ಟಿ ತೌಸೀಫ್, ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಫುಜಾರಿ, ಕೋಡಿಂಬಾಡಿ ಗ್ರಾಪಂ ಯುವ ಕಾಂಗ್ರೆಸ್ ಪುತ್ತೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಫಾರೂಕ್ ಪೆರ್ನೆ, ಗ್ರಾಪಂ ಉಪಾಧ್ಯಕ್ಣ ಜಯಪ್ರಕಾಶ್ ಬದಿನಾರ್, ಉಸ್ತುವಾರಿ ವಿಕ್ರಂ ಶೆಟ್ಟಿ, ಗ್ರಾಪಂ ಅಧ್ಯಕ್ಷೆ ಜಯ, ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ಉಪಾಧ್ಯಕ್ಷೆ ಭಾರತಿ, ವಲಯಾಧ್ಯಕ್ಷ ಅಬ್ದುಲ್ಲ ಶಾಪಿ ಶಾಲಿಮಾರ್, ಸದಸ್ಯರುಗಳಾದ ವನಿತಾ ,ನಳಿನಿ,ತನಿಯಪ್ಪ ಪೂಜಾರಿ, ಸುನಿಲ್ ಪಿಂಟೋ, ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here