ಪುತ್ತೂರು: ಬೀರಮಲೆ ಬೆಟ್ಟಕ್ಕೆ ಸುತ್ತಾಡಲು ಬಂದ ಜೋಡಿಗೆ ಪಾನಮತ್ತ ತಂಡವೊಂದು ಕಿರುಕುಳ ನೀಡಿದ ಘಟನೆ ಜೂ.5ರ ಸಂಜೆ ನಡೆದಿದ್ದು, ಯುವಕರ ತಂಡ ಜೋಡಿಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆಂದು ಮಾದ್ಯಮವೊಂದರಲ್ಲಿ ಪ್ರಸಾರವಾಗಿದೆ.
ಬೆಳ್ತಂಗಡಿ ಮೂಲದ ಜೋಡಿ ಬೀರಮಲೆ ಬೆಟ್ಟಕ್ಕೆ ಬೈಕ್ ನಲ್ಲಿ ಬಂದಿದ್ದರು. ಈ ವೇಳೆ ಯುವಕರ ತಂಡವೊಂದು ಯುವಕ ಯುವತಿಯ ಹೆಲ್ಮೆಟ್ ಕಸಿದು ವಿಡಿಯೋ ಮಾಡಿ ಸಾಮಾಜಿಕಜಾಲತಾಣದಲ್ಲಿ ಹಂಚಿಕೊಂಡಿದ್ದಾರೆಂದು ಜೋಡಿ ಟಿ ವಿ ಮಾದ್ಯಮಕ್ಕೆ ತಿಳಿಸಿದ್ದಾರೆನ್ನಲಾಗಿದೆ. ಈ ಕುರಿತು ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ ಎಂದು ತಿಳಿದು ಬಂದಿದೆ.