ಕೆಯ್ಯೂರು: ʼಬಿಜೆಪಿಯ ಸುಳ್ಳಿಗೆ ಕಾಂಗ್ರೆಸ್ ಉತ್ತರʼ ಜನಜಾಗೃತಿ ಸಭೆ

0

ಕೆಯ್ಯೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಕೆಯ್ಯೂರು ವಲಯ ಕಾಂಗ್ರೆಸ್ ಸಮಿತಿ ಜಂಟಿ ಆಶ್ರಯದಲ್ಲಿ ʼಬಿಜೆಪಿಯ ಸುಳ್ಳಿ ಗೆ ಕಾಂಗ್ರೆಸ್ ಉತ್ತರʼ ಜನಜಾಗೃತಿ ಸಭೆ ಕೆಯ್ಯೂರು ದೇವಿನಗರ ಜಂಕ್ಷನ್ ನಲ್ಲಿ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ  ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ, ಮಹಮ್ಮದ್ ಬಡಗನ್ನೂರು, ಪೂಡ ಅಧ್ಯಕ್ಷ ಅಮಳ ರಾಮಚಂದ್ರ, ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವೆಂಕಪ್ಪ ಗೌಡ, ಬ್ಲಾಕ್ ನ ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ್ ಶೆಟ್ಟಿ, ನರಿಮೊಗರು ವಲಯ ಅಧ್ಯಕ್ಷ ರವೀಂದ್ರ ನೆಕ್ಕಿಲು ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.

ಕೆಯ್ಯೂರು ವಲಯ ಮಾಜಿ ಅಧ್ಯಕ್ಷ ಎ.ಕೆ. ಜಯರಾಮ ರೈ ಕೆಯ್ಯೂರು, ಇ.ಸಂತೋಷ್ ಕುಮಾರ್ ರೈ ಇಳಾಂತಜೆ, ಅಬ್ದುಲ್ ಖಾದರ್ ಮೇರ್ಲ, ವಲಯದ ಉಸ್ತುವಾರಿ ಹರ್ಷದ್ ದರ್ಬೆ, ಪ್ರದಾನ ಕಾರ್ಯದರ್ಶಿ ಹನೀಫ್ ಕೆ.ಎಂ, ಕೆಯ್ಯುರು ಮಹಿಳಾ ಘಟಕದ ಅಧ್ಯಕ್ಷ ರೂಪ ಎಸ್ ರೈ, ಕಾರ್ಯದರ್ಶಿ ಧರಣಿ ಸಿ.ಬಿ, ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಬಟ್ಯಪ್ಪ ರೈ ದೇರ್ಲ, ಶೇಷಪ್ಪ ದೇರ್ಲ, ಮಾಜಿ ಪಂಚಾಯತ್ ಅಧ್ಯಕ್ಷ ಜತ್ತಪ್ಪ  ಗೌಡ ಬೊಳಿಕಲ, ಬ್ಲಾಕ್ ಅಧ್ಯಕ್ಷರುಗಳು, ಬಿಎಲ್ ಎ ಗಳು,  ಕಾಂಗ್ರೆಸ್ ಪಕ್ಷದ ಹಿರಿಯರು ಮತ್ತು ಕಾಂಗ್ರೆಸ್ ಕುಟುಂಬದ ಎಲ್ಲ ಸದಸ್ಯರು ಭಾಗವಹಿಸಿದ್ದರು. ಕೆಯ್ಯೂರು ವಲಯ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಹನೀಫ್ ಕೆ.ಎಂ ವಂದಿಸಿದರು.

LEAVE A REPLY

Please enter your comment!
Please enter your name here