ಪುತ್ತೂರು:ಬೆಟ್ಟಂಪಾಡಿ ವಿದ್ಯಾಗಿರಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ 2024 25ನೇ ವರ್ಷದ ಗೋಕುಲಾಷ್ಟಮಿ ಆಚರಣೆಯ ಪೂರ್ವಭಾವಿ ಸಭೆ ಜು.4ರಂದು ನಡೆಯಿತು.ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ಸತೀಶ್ ರಾವ್ ಉಪಸ್ಥಿತಿಯಲ್ಲಿ ಗೋಕುಲಾಷ್ಟಮಿಯ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಜೈ ಗುರುದೇವ್ ಕಂಪ್ಯೂಟರ್ಸ್ ಈಶ್ವರಮಂಗಲ ಇದರ ಮಾಲಕ ಗಿರೀಶ್ ರೈ ನೀರ್ಪಾಡಿ, ಉಪಾಧ್ಯಕ್ಷರಾಗಿ ಸೌಮ್ಯ ಮನಮೋಹನ್ ಅರಂಬ್ಯ, ಐಟಿ ಕಂಪನಿಯ ಸೀನಿಯರ್ ಸಪೋರ್ಟ್ ಇಂಜಿನಿಯರ್ ಅಂಕಿತ ಶಿವಾನಂದ ಶೆಟ್ಟಿ ಯಕ್ಷಕೃಪಾ ಬೆಟ್ಟಂಪಾಡಿ, ಶಕ್ತಿಕೇಂದ್ರ ನಿಡ್ಪಳ್ಳಿ ಇದರ ಅಧ್ಯಕ್ಷ ಸಂತೋಷ್ ಕುಮಾರ್ ಬೇರಿಕೆ ಹಾಗೂ ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಆಯ್ಕೆಗೊಂಡರು. ಕ್ರೀಡಾ ಸಂಚಾಲಕರಾಗಿ ಜಯಲಕ್ಷ್ಮಿ ಹಾಗೂ ಪ್ರದೀಪ್ ರೈ ನುಳಿಯಾಲು, ಆಹಾರ ಸಮಿತಿಯ ಸಂಚಾಲಕರಾಗಿ ಆದಿತ್ಯ ಘಾಟೆ ದರ್ಬೆ ಮತ್ತು ಭಾರತಿ ಸಂತೋಷ್ ಉಡ್ಡಂಗಳ, ಅಲಂಕಾರ ಸಮಿತಿಯ ಸಂಚಾಲಕರಾಗಿ ಸನತ್ ರೈ ಸಂಗಮ್ ತೋಟದ ಮೂಲೆ, ಸವಿತಾ ಕೋನಡ್ಕ ,ಚಿತ್ರಕಲಾ ಬೊಲಂಬುಡೆ, ತೇಜಸ್ವಿನಿ ನಿಡ್ಪಳ್ಳಿ, ಸ್ವಾಗತ ಸಮಿತಿಯ ಸಂಚಾಲಕರಾಗಿ ಮಹೇಶ್ ಕೆ ಕೋರ್ಮಂಡ, ಧನಂಜಯ ಆನಾಜೆ, ದಿಶಾಚೇತನ್ ವಡ್ಯ ಆಯ್ಕೆಗೊಂಡರು.
ಕಾರ್ಯಕ್ರಮದಲ್ಲಿ ಗೋಕುಲಾಷ್ಟಮಿಯ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಹಾಗೂ ಆಡಳಿತ ಮಂಡಳಿಯ ಸಂಚಾಲಕ ಡಾ. ಸತೀಶ್ ರಾವ್ ಮತ್ತು ಶಿಕ್ಷಕರ ರಕ್ಷಕ ಸಂಘದ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು. ಕೃಷ್ಣವೇಣಿ ಕಾರ್ಯಕ್ರಮ ನಿರೂಪಿಸಿದರು.