ರಾಷ್ಟ್ರೀಯ ಕಬಡ್ಡಿಯಲ್ಲಿ ಆಶಿಶ್ ಕೋಟೆಬಾಗಿಲುಗೆ ಬಹುಮಾನ

0

ಪುತ್ತೂರು: ಉತ್ತರಕಾಂಡದ ಹರಿದ್ವಾರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ 18 ವರ್ಷದ ವಿಭಾಗ ಕಬಡ್ಡಿಯಲ್ಲಿ ಬಿಳಿನೆಲೆಯ ಆಶಿಶ್ ಕೋಟೆಬಾಗಿಲು ಮೂರನೇ ಸ್ಥಾನ ಪಡೆದಿದ್ದಾರೆ.

ವಿವಿಧ ಹಂತಗಳಲ್ಲಿ ಆಡಿ ಈ ಹಂತಕ್ಕೆ ಪ್ರವೇಶ ಪಡೆದಿರುವ ಇವರು ಭಾರತೀಯ ಕ್ರೀಡಾ ಪಾಧಿಕಾರ ಗುಜರಾತಿನಿಂದ ಆಯ್ಕೆಯಾಗಿದ್ದು ಈ ತಂಡ ಮೂರನೇ ಸ್ಥಾನಿಯಾಗಿ ಹೊರಹೊಮ್ಮಿದೆ. ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಕಬಡ್ಡಿ ಅಭ್ಯಾಸ ಮಾಡುತ್ತಿದ್ದು ಕಬಡ್ಡಿ ಕೋಚ್ ರಂಗನಾಥ ಎಂಬರಿಂದ ತರಬೇತಿ ಪಡೆಯುತ್ತಿದ್ದಾರೆ.


ಆಶಿಶ್ ಕೋಟೆಬಾಗಿಲು ಅವರು ಒಂದರಿಂದ ಆರನೇ ತರಗತಿವರೆಗೆ ನೆಟ್ಟಣ ಮೌಂಟ್ ಜಿಯಾನ್ ಪಬ್ಲಿಕ್ ಸ್ಕೂಲ್ನಲ್ಲಿ ಶಿಕ್ಷಣ ಪಡೆದು, ಏಳನೇ ತರಗತಿ ವಿದ್ಯಾಭ್ಯಾಸವನ್ನು ವಿವೇಕಾನಂದ ಶಾಲೆಯಲ್ಲಿ ಪಡೆದರು. ಪ್ರೌಢಶಾಲಾ ಶಿಕ್ಷಣವನ್ನು ದಾವಣಗೆರೆಯ ಸ್ಪೋರ್ಟ್ಸ್ ಹಾಸ್ಟೆಲ್ ನಲ್ಲಿದ್ದು ಅಥಣಿ ಪ್ರೌಢಶಾಲೆಯಲ್ಲಿ ಪಡೆದಿದ್ದಾರೆ. ಪ್ರಸ್ತುತ ದಾರವಾಡದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿದ್ದು ಕೆ.ಎಲ್.ಇ ಕಾಲೇಜು ನಲ್ಲಿ ದ್ವಿತೀಯ ಪಿ.ಯು ಓದುತಿದ್ದಾರೆ. ಇವರು ಕಡಬ ತಾಲೂಕು ಬಿಳಿನೆಲೆ ಗ್ರಾಮದ ಕೋಟೆ ಬಾಗಿಲು ಸಂಧ್ಯಾಮಣಿ ಮತ್ತು ದಿl ಯೋಗೇಶ್ ಕುಮಾರ್ ಅವರ ಪುತ್ರ .

ಕೆ.ಎಸ್.ಪಿ ವಾಲಿಬಾಲ್ ಆಟಗಾರ್ತಿಗಿಯಾಗಿರುವ ಇವರ ತಾಯಿ ಸಂದ್ಯಾಮಣಿ ರಾಷ್ಟ್ರೀಯ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದ್ದಾರೆ. 2016 ರಲ್ಲಿ ಮುಖ್ಯಮಂತ್ರಿ ಪದಕ ವಿಜೇತ ಪೊಲೀಸ್ ಆಗಿದ್ದಾರೆ. ಪ್ರಸ್ತುತ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆ ಮಂಗಳೂರು ಇಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here