ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಯಲ್ಲಿ FOCUS 360 ಶಿಕ್ಷಕರ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ

0

ಪಟ್ಟೆ ಬಡಗನ್ನೂರು: ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಇದರ ವತಿಯಿಂದ ನಡೆಸಲ್ಪಡುವ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆ ಇಲ್ಲಿ ಶಿಕ್ಷಕರ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ ನಡೆಯಿತು.

ಪುತ್ತೂರಿನ ಹೆಸರಾಂತ ಉದ್ಯಮಿಗಳಾದ ಗೋಲೆಕ್ಸ್ ಎಂಟರ್ಪ್ರೈಸಸ್ ಸಂಸ್ಥೆಯ ಮಾಲೀಕರಾದ ಹಾಗೂ ಜೆ.ಸಿ.ಐ ತರಬೇತುದಾರರಾದ ಕೃಷ್ಣಮೋಹನ್ ಪಿ ಎಸ್ ಹಾಗೂ ಮತ್ತೊರ್ವ ತರಬೇತುದಾರರಾದ ಪಶುಪತಿ ಶರ್ಮ ಇವರು ತರಬೇತಿಯನ್ನು ನಡೆಸಿಕೊಟ್ಟರು. FOCUS 360 ಎಂಬ ಶೀರ್ಷಿಕೆಯಡಿ ನಡೆದ ಕಾರ್ಯಾಗಾರದಲ್ಲಿ ಶಿಕ್ಷಕ ವೃತ್ತಿಯ ಹಲವು ಮಜಲುಗಳು ಮತ್ತು ಸವಾಲುಗಳ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ಹೊಂದಿರಬೇಕಾದ ಅಗತ್ಯತೆಗಳ ಕುರಿತು ತರಬೇತುದಾರರು ಮಾಹಿತಿಯನ್ನು ನೀಡಿದರು.

ಸಂಸ್ಥೆಯ ಸಂಚಾಲಕರಾದ ವಿಘ್ನೇಶ್ ಹಿರಣ್ಯರವರು ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಸುಮನ ಬಿ ವಂದಿಸಿದರು. ಕಾರ್ಯಗಾರದಲ್ಲಿ ಸಂಸ್ಥೆಯ ಎಲ್ಲಾ ಬೋಧಕ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here