ಬಹುಮೊತ್ತದ ದೇಣಿಗೆ ಘೋಷಿಸಿದ ಶಾಸಕ ಅಶೋಕ್ ರೈ
ಪುತ್ತೂರು: ಕೋಡಿಂಬಾಡಿಯ ಶ್ರೀ ಮಹಿಷಮರ್ದಿನಿ ದೇವಿಗೆ ಚಿನ್ನದ ಕವಚ ನಿರ್ಮಾಣ ಮಾಡುವ ಕುರಿತು ಭಕ್ತರ ಸಮಾಲೋಚನಾ ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಗಿದ್ದು ಸುಮಾರು 3 ಕೋಟಿ ರೂ ವೆಚ್ಚದಲ್ಲಿ ಚಿನ್ನದ ಕವಚ ನಿರ್ಮಾಣ ನಡೆಯಲಿದೆ.

ದ ಕ ಜಿಲ್ಲೆಯ ಪ್ರಸಿದ್ದ ಕ್ಷೇತ್ರಗಳಲ್ಲಿ ಒಂದಾಗಿರುವ ಕೋಡಿಂಬಾಡಿ ಮಹಿಷಮರ್ದಿನಿ ದೇವಿ ದೇವಸ್ಥಾನಕ್ಕೆ ನಿತ್ಯ ಅನೇಕ ಮಂದಿ ಭಕ್ತರು ಆಗಮಿಸುತ್ತಾರೆ. ದೇವಿಗೆ ಚಿನ್ನದ ಕವಚ ನಿರ್ಮಾಣ ಮಾಡಬೇಕೆಂಬ ಸಂಕಲ್ಪದಂತೆ ಭಕ್ತರ ಸಹಕಾರದಿಂದ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ಕವಚ ನಿರ್ಮಾಣ ಮಾಡುವುದು ಎಂದು ಭಕ್ತರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಶಾಸಕರಿಂದ 35 ಲಕ್ಷ ದೇಣಿಗೆ ಘೋಷಣೆ
ಶಾಸಕ ಅಶೋಕ್ ರೈ ಚಿನ್ನದ ಕವಚ ನಿರ್ಮಾಣಕ್ಕೆ 35 ಲಕ್ಷ ರೂ.ನೀಡುವುದಾಗಿ ಘೋಷಣೆ ಮಾಡಿದರು. ಉಳಿದಂತೆ ಸಭೆಯಲ್ಲಿದ್ದ ಭಕ್ತರು ಚಿನ್ನದ ದೇಣಿಗೆಯನ್ನು ಘೋಷಣೆ ಮಾಡಿದ್ದು, ಭಕ್ತರ ಸಭೆಯಲ್ಲಿ 50 ಲಕ್ಷ ರೂ. ದೇಣಿಗೆಯ ಘೋಷಣೆಯಾಗಿದೆ.
ಒಂದು ವರ್ಷದೊಳಗೆ ಪೂರ್ಣ
ದೇವಿಗೆ ಚಿನ್ನದ ಕವಚ ನಿರ್ಮಾಣ ಕಾರ್ಯವು ಒಂದು ವರ್ಷ ಕಾಲಾವಧಿಯೊಳಗೆ ಪೂರ್ಣಗೊಳ್ಳಲಿದೆ. ಭಕ್ತರೆಲ್ಲರ ಸಹಕಾರದಿಂದ ಈ ಕಾರ್ಯ ನಡೆಯಲಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ರೈ ತಿಳಿಸಿದರು. ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು, ಅರ್ಚಕ ರಾಮಕೃಷ್ಣ ಭಟ್, ಸದಸ್ಯರುಗಳಾದ ದೇವದಾಸ ಪಿಲಿಗುಂಡ, ಕುಮಾರನಾಥ ಎಸ್ ಪಲ್ಲತ್ತಾರು, ರೇಣುಕಾ ಮುರಳೀಧರ್ ರೈ, ಸತೀಶ್ ನಾಯ್ಕ ಮೋನಡ್ಕ, ವಿಜಯಾ ನಾಯ್ಕ, ಕೇಶವ ಭಂಡಾರಿ ಕೈಪ, ಡಾ. ರಾಜಾರಾಂ ಕೆ.ಬಿ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಧರ್ಮದೈವ ಸಮಿತಿ ಗೌರವಾಧ್ಯಕ್ಷ ಮುರಳೀಧರ್ ರೈ, ಜಗನ್ನಾಥ ಶೆಟ್ಟಿ ನಡುಮನೆ, ಉಲ್ಲಾಸ್ ಕೋಟ್ಯಾನ್, ಸುದೇಶ್ ಕುಮಾರ್ ಶಾಂತಿನಗರ, ಕೇದಗೆ ರಾಜೀವ ಶೆಟ್ಟಿ, ಸದಾಶಿವ ರೈ, ಯೋಗೀಶ್ ಸಾಮಾನಿ, ಶಿವಪ್ರಸಾದ್ ಕೋಡಿಂಬಾಡಿ, ಪ್ರತೀಕ್ಷ್, ಪ್ರಭಾಕರ ಸಾಲಿಯಾನ್, ಯತೀಶ್ ಶೆಟ್ಟಿ ಉಪಸ್ಥಿತರಿದ್ದರು.
ವ್ಯವಸ್ಥಾಪಕರಾದ ಸಂತೋಷ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.