ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನಲ್ಲಿ 11ನೇ ವರ್ಷದ ಗಣೇಶೋತ್ಸವ ಸಮಿತಿಯ ಪೂರ್ವಭಾವಿ ಸಭೆಯನ್ನು ಜು.7ರಂದು ನಡೆಸಲಾಯಿತು.
ಸಂಸ್ಥೆಯ ಸಂಚಾಲಕ ಗೋಕುಲ್ನಾಥ್ ಪಿ.ವಿ. ಮಾರ್ಗದರ್ಶನದಲ್ಲಿ ನೂತನ ಶೈಕ್ಷಣಿಕ ವರ್ಷದ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷನಾಗಿ ದ್ವಿತೀಯ ಪಿ.ಯು.ಸಿ. ಕಲಾ ವಿಭಾಗದ ಮಹೇಶ್ ಗೌಡ, ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಉಪಾಧ್ಯಕ್ಷನಾಗಿ ಧನುಷ್, ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಡಿ, ಪಿ.ಯು.ಸಿ ವಾಣಿಜ್ಯ ವಿಭಾಗದ ಕುಶಾಲ್ ಕಾರ್ಯಪ್ಪ ಬಿ.ಡಿ, ಖಜಾಂಜಿಯಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಕೆ.ಡಿ ಜಗದೀಶ್, ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದ ಜನನಿ, ಹಾಗೂ ಸದಸ್ಯರಾಗಿ ಭಾರದ್ವಾಜ್, ಶಮಿತ್ ರೈ, ಪ್ರಜ್ವಲ್, ಕೌಶಿಕ್, ನೂತನ್, ದಿಶಾನ್, ಆಶ್ವಿತ್, ಕೀರ್ತನಾ, ಆದಿತ್ಯ, ಸುಪ್ರೀತಾ, ಸಾನಿಧ್ಯ, ಶಿತಿಲ್, ದೇಚಮ್ಮ, ಮನೋಜ್ ಜೆ.ಎಂ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಪ್ರಾಂಶುಪಾಲರು ಕೆ. ಹೇಮಲತಾ ಗೋಕುಲ್ ನಾಥ್, ಉಪನ್ಯಾಸಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
