ಕೆಂಪು ಕಲ್ಲು, ಮರಳು ಪೂರೈಕೆಯಾಗದೆ ತೊಂದರೆ ಬಿಎಂಎಸ್ ಕುಂಬ್ರ ವಲಯದಿಂದ ಎ.ಸಿ, ತಹಶೀಲ್ದಾರ್‌ಗೆ ಮನವಿ

0

ಪುತ್ತೂರು: ಜಿಲ್ಲಾಡಳಿತ, ಪೊಲೀಸ್ ವರಿಷ್ಠಾಧಿಕಾರಿಗಳು ತೆಗೆದುಕೊಳ್ಳುತ್ತಿರುವ ತೀರ್ಮಾನಗಳಿಂದ ಕೆಂಪು ಕಲ್ಲು, ಮರಳು ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ. ಇದರಿಂದಾಗಿ ಕಾರ್ಮಿಕರು ಕೆಲಸ ಇಲ್ಲದೆ ಬಳಲುವಂತಾಗಿದೆ ಆದ್ದರಿಂದ ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ ಕೊಡುವಂತೆ ಬಿಎಂಎಸ್ ಕಟ್ಟಡ ಕಾರ್ಮಿಕ ಸಂಘ ಕುಂಬ್ರ ವಲಯದಿಂದ ಪುತ್ತೂರು ತಹಶೀಲ್ದಾರ್ ಹಾಗೂ ಸಹಾಯಕ ಕಮೀಷನರ್‌ರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಿಎಮ್‌ಎಸ್ ಕಟ್ಟಡ ಕಾರ್ಮಿಕ ಸಂಘ ಕುಂಬ್ರ ವಲಯದ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲರವರ ನೇತೃತ್ವದಲ್ಲಿ ತೆರಳಿದ ನಿಯೋಗವು ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಹಾಗೂ ತಹಶೀಲ್ದಾರ್ ನಾಗಾರಾಜ್‌ರವರಿಗೆ ಮನವಿ ಸಲ್ಲಿಸಿ ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿಕೊಡುವಂತೆ ಮನವಿ ಮಾಡಿಕೊಂಡರು.


ನಿಯೋಗದಲ್ಲಿ ಬಿಎಮ್‌ಎಸ್ ಕಟ್ಟಡ ಕಾರ್ಮಿಕ ಸಂಘ ಕುಂಬ್ರ ವಲಯದ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಕೈಕಾರ, ಸಂಘಟನಾ ಕಾರ್ಯದರ್ಶಿ ಜಯಂತ ಮುಡಾಲ, ಈಶ್ವರಮಂಗಲ ವಲಯದ ಕೇಶವ ನಾಯ್ಕ ಈಶ್ವರಮಂಗಲ, ಪಾಣಾಜೆ ವಲಯದ ದಿವಾಕರ ಕುಲಾಲ್ ಮತ್ತು ಸದಸ್ಯರಾದ ದಯಾನಂದ ಕಾವು, ಪ್ರಕಾಶ ನಾಯ್ಕ ಪೆರಿಗೇರಿ, ಶ್ರೀನಿವಾಸ ಕಾವು ಹಾಗೂ ಗೋವಿಂದ ನಾಯ್ಕ ಈಶ್ವರಮಂಗಲ ಉಪಸ್ಥಿತರಿದ್ದರು.

‘ ಕೆಂಪು ಕಲ್ಲು, ಮರಳು ಪೂರೈಕೆಯಾಗದ ಕೆಲಸಗಾರರಿಗೆ ಬಹಳಷ್ಟು ತೊಂದರೆಯಾಗಿದೆ. ಕಾರ್ಮಿಕರ ಪರವಾಗಿ ನಾವು ಸದಾ ಧ್ವನಿ ಎತ್ತಲಿದ್ದೇವೆ. ಕಾರ್ಮಿಕರಿಗೆ ಕಟ್ಟಡ ನಿರ್ಮಾಣದ ಸಾಮಾಗ್ರಿ ದೊರಕದೆ ಕೆಲಸ ಇಲ್ಲದೆ ಕಷ್ಟಪಡುವಂತಾಗಿದೆ.ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿಕೊಡುವಂತೆ ವಿನಂತಿ.’
ಪುರಂದರ ಶೆಟ್ಟಿ ಮುಡಾಲ,
ಅಧ್ಯಕ್ಷರು, ಬಿಎಮ್‌ಎಸ್, ಕಟ್ಟಡ ಕಾರ್ಮಿಕ ಸಂಘ ಕುಂಬ್ರ ವಲಯ

LEAVE A REPLY

Please enter your comment!
Please enter your name here