ಪುತ್ತೂರು: ಬನ್ನೂರು ಕರ್ಮಲ ನಿವಾಸಿ, ನಿವೃತ್ತ ಹಿರಿಯ ಅಂಚೆ ಅಧೀಕ್ಷಕ ಗೋವಿಂದ ನಾಯ್ಕ(74ವ.)ರವರು ವಯೋಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೂಲತ ಅಡ್ಯನಡ್ಕ ನಿವಾಸಿಯಾದ ಇವರು ಅಂಚೆ ಇಲಾಖೆಯ ಕೊಡಗು ವಿಭಾಗದಲ್ಲಿ ಅಂಚೆ ಅಧೀಕ್ಷಕರಾಗಿ, ಕೋಲಾರ ವಿಭಾಗದಲ್ಲಿ ಹಿರಿಯ ಅಂಚೆ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಮೃತರು ಪತ್ನಿ ಉಷಾ ಹಾಗೂ ಪುತ್ರಿ ಪುತ್ತೂರಲ್ಲಿ ವೈದ್ಯಾಧಿಕಾರಿಯಾಗಿರುವ ಡಾ.ದೀಕ್ಷಾರವರನ್ನು ಅಗಲಿದ್ದಾರೆ.