ನಿಡ್ಪಳ್ಳಿ : ಪಾಣಾಜೆ ಬಿ.ಜೆ.ಪಿ ಶಕ್ತಿ ಕೇಂದ್ರದ ವತಿಯಿಂದ ಗುರು ಪೌರ್ಣಮಿ ದಿನವಾದ ಜು.10 ರಂದು ಪಾಣಾಜೆ ಗ್ರಾಮದ ನಾಲ್ಕು ಬೂತ್ ನಲ್ಲಿ ಗುರುಗಳನ್ನು ಗೌರವಿಸುವ ಮೂಲಕ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು.
ನಿವೃತ್ತ ಗುರುಗಳಾದ ನಾರಾಯಣ ಎಸ್.ಕೆ, ಪುರಂದರ, ಎಂ.ಜಿ. ವೆಂಕಟ್ರಮಣ ಭಟ್, ಪ್ರತಿಭಾರವರ ಮನೆಗೆ ತೆರಳಿ ಗೌರವ ಸಲ್ಲಿಸಿ ಗುರು ವಂದನೆ ಸಲ್ಲಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘದ ಕಾರ್ಯದರ್ಶಿ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಬಿ.ಜೆ.ಪಿ ಪಾಣಾಜೆ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರೇಮ್ ರಾಜ್ ಆರ್ಲಪದವು, ಪುತ್ತೂರು ಗ್ರಾಮಾಂತರ ಮಂಡಲ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರದೀಪ್ ಪಾಣಾಜೆ , ಪುತ್ತೂರು ಗ್ರಾಮಾಂತರ ಮಂಡಲ ಮಹಿಳಾ ಮೋರ್ಚಾದ ಕಾರ್ಯದರ್ಶಿ ಜಯಶ್ರೀ ದೇವಸ್ಯ,ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯೆ ಸುಲೋಚನ ,ಬೂತ್ ಅಧ್ಯಕ್ಷರಾದ ಸಂದೀಪ್ ಕೆ, ಬೂತ್ ಕಾರ್ಯದರ್ಶಿ ಕೀರ್ತಿರಾಜ್ ಉಡ್ಡಂಗಳ,ಪಾಣಾಜೆ ಹಾಲು ಉತ್ಪಾದಕರ ಸಹಾಕಾರಿ ಸಂಘದ ನಿರ್ದೇಶಕ ಸಂತೋಷ್ ರೈ ಗಿಳಿಯಾಲು, ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ರವಿಶಂಕರ ಶರ್ಮ ಬೊಳ್ಲುಕಲ್ಲು ,ಬೂತ್ ಪದಾಧಿಕಾರಿಗಳಾದ ಹರೀಶ್ ಕುಲಾಲ್ ಆರ್ಲಪದವು ,ಕರುಣಾಕರ್ ಕುಲಾಲ್ ಆರ್ಲಪದವು ಉಪಸ್ಥಿತರಿದ್ದರು.