ನಗರೋತ್ಥಾನ ಕಾಮಗಾರಿ ಮಳೆಗೆ ಕರಗುತ್ತಿರುವ ಆರೋಪ – ಚಿಕ್ಕಮೂಡ್ನೂರು ಕಲಿಯುಗ ಸೇವಾ ಸಮಿತಿಯಿಂದ ಮನವಿ

0

ಪುತ್ತೂರು: ಇತ್ತೀಚೆಗೆ ನಗರಸಭಾ ವ್ಯಾಪ್ತಿಯಲ್ಲಿ ಬೊಳುವಾರು ಮುಖ್ಯರಸ್ತೆಗೆ ನಗರೊತ್ಥಾನ ಯೋಜನೆಯಿಂದ ನಡೆದ ಡಾಮರೀಕರಣ ಮಳೆಗೆ ಕರಗಿ ಅನುದಾನಗಳು ವ್ಯರ್ಥವಾಗುತ್ತಿರುವ ಕುರಿತು ಚಿಕ್ಕಮೂಡ್ನೂರು ಕಲಿಯುಗ ಸೇವಾಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿಗಳಿಗೆ ಮರುಡಾಮರೀಕರಣಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ.

ಮಳೆ ಪ್ರಾರಂಭವಾದ ಬಳಿಕ ಈ ರಸ್ತೆ ಕೆಲಸ ಪ್ರಾರಂಭಿಸಲಾಗಿದೆ. ಮಳೆಗಾಲ ಪ್ರಾರಂಭದಲ್ಲೇ ಡಾಮರೀಕರಣಗಳು ಕರಗಲು ಪ್ರಾರಂಭವಾಗಿದೆ. ಬೊಳುವಾರು ಜಂಕ್ಷನ್‌ನಲ್ಲಿ ಪ್ರತಿವರ್ಷ ಡಾಮರು ಹಾಕಿದರೂ ರಸ್ತೆಯಲ್ಲಿ ಹೊಂಡಗಳು ಕಡಿಮೆಯಾಗುವುದಿಲ್ಲ. ಇಲ್ಲಿಗೆ ಶಾಶ್ವತ ಪರಿಹಾರಬೇಕು ಎನ್ನುವ ಯೋಜನೆ, ಯೋಚನೆಗಳು ಕೂಡ ನಗರಸಭೆಗೆ ಉಂಟಾಗುತ್ತಾ ಇಲ್ಲ. ಈ ರೀತಿ ಸಾರ್ವಜನಿಕ ತೆರಿಗೆಯ ಹಣ ವ್ಯರ್ಥವಾಗುವುದನ್ನು ಯಾರು ಇಷ್ಟಪಡುವುದಿಲ್ಲ ಈ ಕುರಿತ ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here