ಸಮಾಜಕ್ಕೆ ಮಾರ್ಗದರ್ಶನ ನೀಡುವಲ್ಲಿ ಗುರುಗಳ ಪಾತ್ರ ಪ್ರಮುಖ -ನಳಿನ್ ಕುಮಾರ್ ಕಟೀಲ್
ಸವಣೂರು: ಗುರುಪರಂಪರೆಯು ಜ್ಞಾನ ಮತ್ತು ಸಂಪ್ರದಾಯಗಳನ್ನು ಒಂದು ತಲೆಮಾರಿನಿಂದ ಇನ್ನೊಂದಕ್ಕೆ ಹಸ್ತಾಂತರಿಸುವ ಒಂದು ವ್ಯವಸ್ಥೆಯಾಗಿದೆ. ಇದು ಶಿಷ್ಯರಿಗೆ ಮಾರ್ಗದರ್ಶನ ನೀಡುವುದಲ್ಲದೆ, ಸಾಮಾಜಿಕ ಉನ್ನತಿಗೆ ಸಹಾಯ ಮಾಡುತ್ತದೆ. ಗುರುಪರಂಪರೆಯು ಭಾರತೀಯ ಸಂಸ್ಕೃತಿಯಲ್ಲಿ ಬಹಳ ಮಹತ್ವದ್ದಾಗಿದೆ ಮತ್ತು ಇದು ಶಿಷ್ಯರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಪಾಲ್ತಾಡಿ ಗ್ರಾಮದ ಬಂಬಿಲ ನಿವಾಸಿ ಹಿರಿಯ ಶಿಕ್ಷಕಿ ಜಾನಕಿ ಹಾಗೂ ನಿವೃತ್ತ ಅಂಚೆ ಪಾಲಕ ಪುರಂದರ ಗೌಡ ಅವರಿಗೆ ಗುರುಪೂರ್ಣಿಮೆ ಪ್ರಯುಕ್ತ ಅವರ ಮನೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಪಾಲ್ತಾಡಿ ಬೂತ್ ಸಮಿತಿ 70ರ ವತಿಯಿಂದ ಗುರುಪೂರ್ಣಿಮೆ ಪ್ರಯುಕ್ತ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ ಕೆ. ಪಾಲ್ತಾಡಿ ಶಕ್ತಿ ಕೇಂದ್ರದ ಪ್ರಮುಖ್ ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ, ಬೂತ್ ಸಮಿತಿ ಅಧ್ಯಕ್ಷ ಸತೀಶ್ ಅಂಗಡಿಮೂಲೆ, ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್, ಸವಣೂರು ಪಂಚಾಯತ್ ಅಧ್ಯಕ್ಷೆ ಸುಂದರಿ ಬಿ ಯಸ್, ಸದಸ್ಯರಾದ ಹರಿಕಲಾ ರೈ ಕುಂಜಾಡಿ,ವಿನೋದಾ ರೈ ಚೆನ್ನಾವರ, ಭರತ್ ರೈ ಪಾಲ್ತಾಡಿ, ಪ್ರಮುಖರಾದ ಸುರೇಶ್ ಬಂಬಿಲದೋಳ ಮೊದಲಾದವರು ಉಪಸ್ಥಿತರಿದ್ದರು.