*ದ.ಕ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಡಿಸ್ಕೌಂಟ್ ಸೇಲ್
- *ಆಯ್ಕೆ ಯಾವುದೇ ಇರಲಿ, ಬೆಲೆ ಅತೀ ಕಡಿಮೆ
- *ಉತ್ತಮ ಗುಣಮಟ್ಟ, ಅತೀ ಕಡಿಮೆ
- *ಪ್ರತೀ ದಿನ ಹೊಸ ಹೊಸ ಸಂಗ್ರಹ

ಪುತ್ತೂರು: ಜವುಳಿ ಉದ್ಯಮದಲ್ಲೇ ಹೊಸತನವನ್ನು ಪರಿಚಯಿಸುತ್ತಾ ಹತ್ತೂರಿನಲ್ಲಿ ಮನೆ ಮಾತಾಗಿರುವ ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್ ರಸ್ತೆಯ ರಾಧಾ’ಸ್ನಲ್ಲಿ ಫ್ಯಾಶನ್ ಲೋಕದ ಮಹಾ ಉತ್ಸವ ಮಾನ್ಯೂನ್ ಮೇಳ ಜು.12ರಿಂದ ಪ್ರಾರಂಭಗೊಳ್ಳಲಿದೆ. ಇದು ದ.ಕ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಡಿಸ್ಕೌಂಟ್ ಸೇಲ್ ಆಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯಲ್ಲಿ ತಮ್ಮ ಮನದಿಚ್ಚೆಯ ಉಡುಪುಗಳನ್ನು ಕೊಂಡುಕೊಳ್ಳುವ ವಿಪುಲ ಅವಕಾಶಗಳನ್ನು ನೀಡುತ್ತಿದೆ. ಈ ವರ್ಷವೂ ಪ್ರಾರಂಭಗೊಂಡಿದ್ದು, ಪ್ರತಿ ದಿನವೂ ಹೊಸ ಹೊಸ ಬಟ್ಟೆಗಳ ಸಂಗ್ರಹ, ವಿನೂತನ ಶೈಲಿಯ, ಕಣ್ಮನ ಸೆಳೆಯುವ ನವನವೀನ ಮಾದರಿಯ ಉಡುಪುಗಳು, ಅತೀ ಕಡಿಮೆ ಬೆಲೆಗೆ ದೊರೆಯಲಿದ್ದು, ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳನ್ನು ಖರೀದಿಸುವ ವಿಫುಲ ಅವಕಾಶವನ್ನು ರಾಧಾಸ್ ಮಳಿಗೆಯು ಕಲ್ಪಿಸಿದೆ. ಮದುವೆ ಜವುಳಿ ಸೇರಿದಂತೆ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಎಲ್ಲಾ ರೀತಿಯ ರೆಡಿಮೇಡ್ ಉಡುಪುಗಳನ್ನು ಅತೀ ಕಡಿಮೆ ಬೆಲೆಯಲ್ಲಿ ಖರೀದಿಸಲು ಸುವರ್ಣಾವಕಾಶವನ್ನು ಸಮರ್ಪಿಸುತ್ತಿದೆ.
ಅತೀ ಕಡಿಮೆ ದರ, ಹೊಸ ಹೊಸ ಸಂಗ್ರಹ:
ಮಾನ್ಸೂನ್ ಮೇಳ-ಮಹಾ ಉತ್ಸವದಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಪ್ರಾರಂಭವಾಗುವ ವಿವಿಧ, ವೆರೈಟಿ, ವಿನ್ಯಾಸಗಳ ಚೂಡಿದಾರ್ ಟಾಪ್ಗಳು, ಅತೀ ಕಡಿಮೆ ಬೆಲೆಯ ನೈಟಿಗಳು, ಗವನ್, ನೈಟ್ ಪ್ಯಾಂಟ್ಗಳು, ಟಿ-ಶರ್ಟ್ ಗಳು, ಮಕ್ಕಳ ಉಡುಪುಗಳು ಲಭ್ಯವಿದ್ದು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ. ಕಣ್ಮನ ಸೆಳೆಯುವ ಸೀರೆಗಳು, ಪುರುಷರ ಉಡುಪುಗಳು ಅತೀ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಸಾರಿ, ಚೂಡಿದಾರ್ ಪೀಸ್ಗಳು, ಕುರ್ತಿಸ್, ರೆಡಿಮೇಡ್ ಚೂಡಿದಾರ್ಗಳು, ನೈಟಿ, ಜಂಟ್ಸ್ ಪ್ಯಾಂಟ್-ಶರ್ಟ್ ಹಾಗೂ ಮಕ್ಕಳ ವೆಸ್ಟರ್ನ್ ಔಟ್ಫಿಟ್ಗಳು ಸೇರಿದಂತೆ ಮಕ್ಕಳು, ಮಹಿಳೆಯರ ಹಾಗೂ ಪುರುಷರ ಎಲ್ಲಾ ಬಗೆಯ ನವ ನವೀನ ಮಾದರಿಯ ಉಡುಪುಗಳ ಬೃಹತ್ ಸಂಗ್ರಹವಿದೆ. ಫ್ಯಾಕ್ಟರಿಯಿಂದ ನೇರವಾಗಿ ಖರೀದಿಸಿದ ಉತ್ತಮ ಗುಣ ಮಟ್ಟದ ಉಡುಪುಗಳನ್ನು ಮಳಿಗೆಯಲ್ಲಿ ಗ್ರಾಹಕರಿಗೆ ಮಿತ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮೂರು ಅಂತಸ್ತಿನ ಮಳಿಗೆಯಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಉಡುಪುಗಳ ಪ್ರತ್ಯೇಕ ವಿಭಾಗಗಳಲ್ಲಿ ಮಾನ್ಸೂನ್ ಮೇಳಕ್ಕೆ ಗ್ರಾಹಕರಿಗೆ ಉತ್ತಮ ಸೇವೆಗೆ ಮಳಿಗೆಯು ಸಿದ್ದಗೊಂಡಿದೆ. ಮಾನ್ಸೂನ್ ಕೊಡುಗೆಗಳು ಕೆಲವೇ ದಿನಗಳ ಕಾಲ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮ್ಹಾಲಕರು ತಿಳಿಸಿದ್ದಾರೆ.
ಮದುವೆಯ ಎಕ್ಸ್ಕ್ಲೂಸಿವ್ ಕಲೆಕ್ಷನ್:
ಪುತ್ತೂರು ಮಾತ್ರವಲ್ಲದೆ ಜಿಲ್ಲೆಯಾದ್ಯಂತ ತನ್ನ ಛಾಪು ರಾಧಾ’ಸ್ ಮದುವೆ ಸೀರೆಗಳಿಗೂ ಪ್ರಥಮ ಆಯ್ಕೆಯಾಗಿದೆ. ಮದುವೆಯ ಶೃಂಗಾರಕ್ಕೆ ಮನಮೋಹಕ ಸೀರೆಗಳ ಅಪೂರ್ವ ಸಂಗ್ರಹವು ಮಳಿಗೆಯಲ್ಲಿದೆ. ಪ್ರತಿ ದಿನ ಮದುವೆ ಜವುಳಿಯ ಹೊಸ ಸಂಗ್ರಹವಿರುವ ಪುತ್ತೂರಿನ ಏಕೈಕ ಮಳಿಗೆಯಾಗಿದೆ. ಹಿರಿಯ ಅನುಭವೀ ಸಿಬ್ಬಂದಿಗಳಿಂದ ಗ್ರಾಹಕರ ಅಭೀಷ್ಟೆಗಳಿಗೆ ಅನುಗುಣವಾಗಿ ಮಳಿಗೆಯಲ್ಲಿ ಸಿಬ್ಬಂದಿಗಳು ನೀಡುತ್ತಿರುವ ಸೇವೆಯಿಂದಾಗಿ ಹತ್ತೂರಿನಲ್ಲಿಯೂ ಹೆಸರಾಂತ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.