ರೋಟರಿ ಪುತ್ತೂರು ಯುವ ಪದ ಪ್ರದಾನ

0

ಪೋಲಿಯೊ ನಿರ್ಮೂಲನೆ ರೋಟರಿ ಹೆಗ್ಗಳಿಕೆ-ರಂಗನಾಥ್ ಭಟ್

ಪುತ್ತೂರು:ನೆರೆಯ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಕೆಲವು ಪ್ರಕರಣಗಳು ಇವೆಯಾದರೂ ಹನಿಗೂಡಿ ಹಳ್ಳ ಎಂಬಂತೆ ಸೇವಾ ಸಂಸ್ಥೆಯಾಗಿರುವ ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ಮಾರಕ ರೋಗವೆನಿಸಿದ ಪೋಲಿಯೊ ಅನ್ನು ಶೇ.99 ನಿರ್ಮೂಲನೆ ಮಾಡಿದ ಹೆಗ್ಗಳಿಕೆ ಹೊಂದಿದ್ದು, ಅಸಂಖ್ಯಾತ ರೋಟರಿ ಬಂಧುಗಳು ರೋಟರಿ ಫೌಂಡೇಶನ್‌ಗೆ ನೀಡಿದ ದೇಣಿಗೆಯಿಂದ ಇದು ಸಾಧ್ಯವಾಗಿದೆ. ಆದ್ದರಿಂದ ರೋಟರಿ ಸಂಸ್ಥೆಯಲ್ಲಿ ಸದಸ್ಯತನ ಅಭಿವೃದ್ಧಿಗಾಗಿ ಎಲ್ಲರೂ ಪ್ರಯತ್ನಿಸಿದಾಗ ಪೋಲಿಯೊವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಬಹುದು ಎಂದು ರೋಟರಿ ಜಿಲ್ಲೆ 3181 ಇದರ ಪಿಡಿಜಿ ರಂಗನಾಥ್ ಭಟ್ ಹೇಳಿದರು.


ಜು.9 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಸಂಜೆ ಜರಗಿದ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಯುವ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಿ ಮಾತನಾಡಿದರು.


ಮುಂದಿನ ದಿನಗಳಲ್ಲಿ ಮಹಿಳೆಯರ ರಾಜ್ಯಭಾರ-ಪ್ರಮೀಳಾ ರಾವ್:
ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್‌ರವರು ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಮಹಿಳೆಯರಿಗೂ ಸ್ಥಾನ ನೀಡಬೇಕೆಂದು ಹೋರಾಟ ನಡೆಸಿದ್ದರ ಪರಿಣಾಮವಾಗಿ 1989ರಲ್ಲಿ ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ದಕ್ಕಿತ್ತು. ಪುತ್ತೂರು ಯುವ ರೋಟರಿಯಲ್ಲಿ ಪ್ರಸ್ತುತ ಮಹಿಳಾ ರೊಟೇರಿಯನ್ಸ್‌ಗಳು ಅಧಿಕ ಸಂಖ್ಯೆಯಲ್ಲಿದ್ದು ಅಂದು ಮಹಿಳೆಯರ ಪ್ರಾತಿನಿಧ್ಯಕ್ಕೆ ಹೋರಾಟ ಮಾಡಿದ್ದಕ್ಕೆ ಇಂದು ಫಲ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಮಹಿಳೆಯರ ರಾಜ್ಯಭಾರ ಆಗಬಹುದು ಎನ್ನುವ ಖುಶಿ ಆಗುತ್ತದೆ ಎಂದರು.

ಚಿತ್ರ:ರಘು ಫೊಟೋಶಾಫ್ ಕೋರ್ಟ್ ರೋಡ್


ವೈಬ್ರೆಂಟ್ ಕ್ಲಬ್ ಪುತ್ತೂರು ಯುವ-ಭರತ್ ಪೈ:
ರೋಟರಿ ವಲಯ ಸೇನಾನಿ ಭರತ್ ಪೈ ಮಾತನಾಡಿ, ರೋಟರಿ ಪುತ್ತೂರು ಯುವ ಕ್ಲಬ್ ತನ್ನ ಪೂರ್ವಾಧ್ಯಕ್ಷರುಗಳ ಶ್ರಮ ಹಾಗೂ ಸದಸ್ಯರ ಪಾಲ್ಗೊಳ್ಳುವಿಕೆಯಿಂದ ಇಂದು ವೈಬ್ರೆಂಡ್ ಕ್ಲಬ್ ಆಗಿ 11ನೇ ವರ್ಷವನ್ನು ಕಾಣುತ್ತಿದೆ. ಕಳೆದ ವರ್ಷ ಅಶ್ವಿನಿಕೃಷ್ಣ ಮುಳಿಯರವರ ನೇತೃತ್ವದಲ್ಲಿ ಕ್ಲಬ್‌ನ ಏಳು ವಲಯಗಳಲ್ಲಿ ಉತ್ತಮ ಯೋಜನೆಗಳನ್ನು ಹಾಕಿಕೊಂಡು ಸೇವೆ ನೀಡಿರುತ್ತದೆ. ಕ್ಲಬ್ ನೂತನ ಅಧ್ಯಕ್ಷ ಕುಸುಮ್‌ರಾಜ್‌ರವರು ಕೂಡ ಮತ್ತಷ್ಟು ಯೋಜನೆಗಳನ್ನು ಹಾಕಿಕೊಳ್ಳುವಲ್ಲಿ ಸಫಲರಾಗಲಿ ಎಂದರು.


ಪಬ್ಲಿಕ್ ಇಮೇಜ್ ಗಳಿಸುವಂತಹ ಸಮಾಜಮುಖಿ ಕಾರ್ಯಗಳನ್ನು ಮಾಡೋಣ-ಶಶಿಧರ್ ಕಿನ್ನಿಮಜಲು:
ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಮಾತನಾಡಿ, ಜನತೆಯ ಜನಮಾನಸದಲ್ಲಿ ನೆನಪಿನಲ್ಲಿ ಉಳಿಯುವಂತಹ ಯೋಜನೆಗಳನ್ನು ಹಾಕಿ ಯುವ ಕ್ಲಬ್ ರೋಟರಿ ಜಿಲ್ಲೆಯಲ್ಲಿ ಡೈಮಂಡ್ ಫ್ಲಸ್ ಪ್ರಶಸ್ತಿಯನ್ನು ಗಳಿಸಿರುವುದು ಶ್ಲಾಘನೀಯ. ನಾವೆಲ್ಲಾ ರೊಟೇರಿಯನ್ಸ್‌ಗಳು ಒಗ್ಗಟ್ಟಾಗಿ ಪಬ್ಲಿಕ್ ಇಮೇಜ್ ಗಳಿಸುವಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.


ಸದಸ್ಯರ ಸ್ನೇಹದ ಒಗ್ಗಟ್ಟಿನಿಂದ ಸೇವೆ, ಯೋಜನೆ ಯಶಸ್ವಿ-ಅಶ್ವಿನಿಕೃಷ್ಣ ಮುಳಿಯ:
ರೋಟರಿ ಕ್ಲಬ್ ಪುತ್ತೂರು ಯುವದ ನಿರ್ಗಮಿತ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಮಾತನಾಡಿ, ಸಮುದಾಯದಲ್ಲಿನ ಫಲಾನುಭವಿಗಳಿಗೆ ಸರಿಯಾದ ಸಮಯದಲ್ಲಿ ಸ್ಪಂದಿಸುವ ಮೂಲಕ ಕಳೆದ ವರ್ಷದ ರೋಟರಿ ಧ್ಯೇಯವಾಗಿರುವ ಮ್ಯಾಜಿಕ್ ಆಫ್ ರೋಟರಿಗೆ ವಿಶೇಷ ಕಳೆ ತಂದಿರುವುದಕ್ಕೆ ರೋಟರಿ ಯುವದಲ್ಲಿನ ಸ್ನೇಹದ ಒಗ್ಗಟ್ಟು ಕಾರಣವಾಗಿದೆ. ಸೇವೆ ಮತ್ತು ಯೋಜನೆಯೊಂದಿಗೆ ಯುವದ ಸದಸ್ಯರು ಶಕ್ತಿಯುತವಾಗಿ ಹೊಂದಾಣಿಕೆಯೊಂದಿಗೆ ಕ್ಲಬ್ ಅನ್ನು ಮುನ್ನೆಡೆಸುವಲ್ಲಿ ಸಹಕರಿಸಿರುವುದಕ್ಕೆ ಕೃತಜ್ಞತೆಗಳು ಎಂದರು.


3 ಸದಸ್ಯರ ಸೇರ್ಪಡೆ:
ಎಲೆಕ್ಟ್ರೋನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ಪದವೀಧರರಾಗಿದ್ದು ಕಂಪ್ಯೂಟರ್ ಸೇಲ್ಸ್ ಮತ್ತು ಐಟಿ ಇನ್ಫ್ರಾಸ್ಟ್ರಕ್ಚರ್ ಆಗಿರುವ ಶಿವಪ್ರಕಾಶ್, ಆಯುರ್ವೇದಿಕ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜನ್ ಆಗಿರುವ ಡಾ.ಪ್ರಭು ಎನ್, ಮಹಾಲಕ್ಷ್ಮಿ ಗ್ಲಾಸ್ ಅಂಡ್ ಫ್ಲೈವುಡ್ಸ್ ಮಾಲಕ ಭರತ್ ನಾಯಕ್‌ರವರುಗಳನ್ನು ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್‌ರವರು ರೋಟರಿ ಪಿನ್ ತೊಡಿಸುವ ಮೂಲಕ ಕ್ಲಬ್ ಸರ್ವಿಸ್‌ನಡಿಯಲ್ಲಿ ಅಧಿಕೃತವಾಗಿ ಕ್ಲಬ್‌ಗೆ ಸೇರ್ಪಡೆಗೊಳಿಸಿದರು.


ವಿದ್ಯಾರ್ಥಿವೇತನ/ಸ್ಯಾನಿಟರಿ ನ್ಯಾಪ್ಕಿನ್ ಹಸ್ತಾಂತರ:
ಕೆನಡಾ ನಿವಾಸಿ ತೋನ್ಸೆ ಅನಂತ್ ಪೈರವರ ಪ್ರಾಯೋಜಕತ್ವದಲ್ಲಿ ಐದು ವರ್ಷಗಳ ಸಂಪೂರ್ಣ ಶಿಕ್ಷಣ ಶುಲ್ಕ ಭರಿಸಿದ ಚೆಕ್ ಅನ್ನು ಫಲಾನುಭವಿ ಕು.ಅನುಷ್ಕಾ ಪ್ರಭುರವರಿಗೆ ಹಾಗೂ ಕ್ಲಬ್‌ನ ಆರೋಗ್ಯ ಮತ್ತು ನೈರ್ಮಲ್ಯ ಯೋಜನೆಯಡಿಯಲ್ಲಿ ಕೊಕ್ಕಡ ಪಟ್ರಮೆ ಗ್ರಾಮದ ಶ್ರೀ ರಾಮ ಪ್ರೌಢಶಾಲೆಗೆ ಸ್ಯಾನಿಟರಿ ನ್ಯಾಪ್ಕಿನ್ ಬರ್ನರ್ ಮೆಷಿನ್ ಅನ್ನು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಶೆಟ್ಟಿರವರಿಗೆ ಪಿಡಿಜಿ ರಂಗನಾಥ್ ಭಟ್‌ರವರು ಹಸ್ತಾಂತರಿಸಿದರು.


ಪಿ.ಎಚ್.ಎಫ್ ಗೌರವ:
ಇಂಟರ್ನ್ಯಾಷನಲ್ ಸರ್ವಿಸ್ ವತಿಯಿಂದ ರೋಟರಿ ಫೌಂಡೇಶನ್‌ಗೆ ಟಿ.ಆರ್.ಎಫ್ ದೇಣಿಗೆ ನೀಡಿ ಪಿ.ಎಚ್.ಎಫ್ ಪದವಿ ಪಡೆದ ಕ್ಲಬ್‌ನ ಚೇತನ್ ಪ್ರಕಾಶ್ ಕಜೆ ಹಾಗೂ ಕ್ಲಬ್ ಸದಸ್ಯರಿಂದ ಶೇ.ನೂರು ಟಿ.ಆರ್.ಎಫ್‌ಗೆ ದೇಣಿಗೆಯನ್ನು ಸಂಗ್ರಹಿಸಿದ ಕೋಶಾಧಿಕಾರಿ ಸಚಿನ್ ನಾಯಕ್ ಇಂದಾಜೆರವರನ್ನು ಅಭಿನಂದಿಸಲಾಯಿತು.


ನಿಕಟಪೂರ್ವ ಪದಾಧಿಕಾರಿಗಳಿಗೆ ಸನ್ಮಾನ:
ಕಳೆದ ವರ್ಷ 12601 ಫಲಾನುಭವಿಗಳಿಗೆ ಸೇವೆಯ ಹಸ್ತ ಚಾಚಿದ ಹೆಗ್ಗಳಿಕೆಯ ಜೊತೆಗೆ ಸದಸ್ಯರೊಡಗೂಡಿ ಮೂರು ಸಲ ಪಿಕ್ನಿಕ್ ಹಮ್ಮಿಕೊಂಡಿರುವ ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ವಚನ ಜಯರಾಮ್ ಹಾಗೂ ಕ್ಲಬ್ ಮಾಜಿ ಅಧ್ಯಕ್ಷರಾಗಿದ್ದು ರೋಟರಿ ಅಸಿಸ್ಟೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿರುವ ಡಾ.ಹರ್ಷಕುಮಾರ್ ರೈರವರುಗಳನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.


ಪದ ಪ್ರದಾನ:
ಕ್ಲಬ್ ನೂತನ ಅಧ್ಯಕ್ಷ ಕುಸುಮ್‌ರಾಜ್, ಕಾರ್ಯದರ್ಶಿ ಅಭೀಷ್ ಕೆ, ಕೋಶಾಧಿಕಾರಿ ಸಚಿನ್ ನಾಯಕ್ ಎಸ್. ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಉಪಾಧ್ಯಕ್ಷೆ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕಿ ವಚನ ಜಯರಾಮ್, ಸಾರ್ಜಂಟ್ ಎಟ್ ಆಮ್ಸ್೯ ಹರಿಪ್ರಸಾದ್, ವೊಕೇಶನಲ್ ಸರ್ವಿಸ್ ನಿರ್ದೇಶಕ ಸುದರ್ಶನ್ ರೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಶರತ್ ಶ್ರೀನಿವಾಸ್, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ಸುದರ್ಶನ್ ಹಾರಕರೆ, ಯೂತ್ ಸರ್ವಿಸ್ ನಿರ್ದೇಶಕ ಪ್ರಜ್ಞಾ ಸಿದ್ಧಾರ್ಥ್ ಮುಳಿಯ, ಬುಲೆಟಿನ್ ಎಡಿಟರ್ ರಾಜೇಶ್ವರಿ ಆಚಾರ್, ಚೇರ್ಮನ್‌ಗಳಾಗಿ ಸೋನಾ ಪ್ರದೀಪ್(ಮೆಂಬರ್‌ಶಿಪ್), ಅನೂಪ್(ಟಿ.ಆರ್.ಎಫ್), ಡಾ.ಯದುರಾಜ್(ಪಬ್ಲಿಕ್ ಇಮೇಜ್), ಹರ್ಷಕುಮಾರ್(ಜಿಲ್ಲಾ ಪ್ರಾಜೆಕ್ಟ್), ತ್ರಿವೇಣಿ ಗಣೇಶ್ (ಸಿಎಲ್‌ಸಿಸಿ), ಅನಿಲ್ ಮುಂಡೋಡಿ(ಪಲ್ಸ್ ಪೋಲಿಯೊ), ಅಜಯ್‌ರಾಮ್ ಕೋಡಿಬೈಲು(ಸಾಂಸ್ಕೃತಿಕ), ಚೇತನ್ ಪ್ರಕಾಶ್ ಕಜೆ(ಕ್ರೀಡೆ)ರವರಿಗೆ ಪಿಡಿಜಿ ರಂಗನಾಥ್ ಭಟ್‌ರವರು ಪದ ಪ್ರದಾನವನ್ನು ನೆರವೇರಿಸಿದರು.


ಕ್ಲಬ್ ಸದಸ್ಯೆ ಶ್ರೀಮತಿ ಚೈತ್ರಿಕಾ ಕೋಡಿಬೈಲ್ ಪ್ರಾರ್ಥಿಸಿದರು. ಕ್ಲಬ್ ನಿರ್ಗಮಿತ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಸ್ವಾಗತಿಸಿ, ನೂತನ ಕಾರ್ಯದರ್ಶಿ ಅಭೀಷ್ ಕೆ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ಶ್ರೀಮತಿ ವಚನ ಜಯರಾಮ್ ಕ್ಲಬ್ ವರದಿ ಮಂಡಿಸಿದರು. ಸೋನಾ ಪ್ರದೀಪ್, ಶ್ರೇಯಾ ಸಾಯಿರಾಮ್, ಶೋಭಾ ಅನಿಲ್, ಅರ್ಪಿತಾ ಕನಿಷ್ಕರವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಸ್ವಾಗತಿಸಲಾಯಿತು. ಸುಧನ್ವ ಆಚಾರ್ಯ(ಪದ ಪ್ರದಾನ ಅಧಿಕಾರಿ), ನಿರೀಕ್ಷಿತ್ ರೈ(ಅಸಿಸ್ಟೆಂಟ್ ಗವರ್ನರ್), ಅನ್ನಪೂರ್ಣ ಶರ್ಮ(ವಲಯ ಸೇನಾನಿ), ಉಮೇಶ್ ನಾಯಕ್( ರೋಟರಿ ಈಸ್ಟ್ ಅಧ್ಯಕ್ಷ)ರವರು ಪರಿಚಯ ಮಾಡಿದರು. ಕ್ಲಬ್ ಸರ್ವಿಸ್ ನಿರ್ದೇಶಕ ವಚನ ಜಯರಾಮ್, ವೊಕೇಶನಲ್ ಸರ್ವಿಸ್ ನಿರ್ದೇಶಕ ಸುದರ್ಶನ್ ರೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಶರತ್ ಶ್ರೀನಿವಾಸ್, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ಸುದರ್ಶನ್ ಹಾರಕರೆ, ಯೂತ್ ಸರ್ವಿಸ್ ನಿರ್ದೇಶಕ ಪ್ರಜ್ಞಾ ಸಿದ್ಧಾರ್ಥ್ ಮುಳಿಯ, ಬುಲೆಟಿನ್ ಎಡಿಟರ್ ರಾಜೇಶ್ವರಿ ಆಚಾರ್, ಸಾರ್ಜಂಟ್ ಎಟ್ ಆಮ್ಸ್೯ ಹರಿಪ್ರಸಾದ್‌ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಅಧ್ಯಕ್ಷ ಉಮೇಶ್ ನಾಯಕ್ ಹಾಗೂ ಅನ್ನಪೂರ್ಣ ಶರ್ಮ ಕಾರ್ಯಕ್ರಮ ನಿರೂಪಿಸಿದರು.


ಜನಪರ ಯೋಜನೆಗಳಿಂದ ಪಬ್ಲಿಕ್ ಇಮೇಜ್…
11ನೇ ವರ್ಷದ ಕ್ಲಬ್ ಅಧ್ಯಕ್ಷನಾಗಿ ಕ್ಲಬ್‌ನ್ನು ಸಮರ್ಥವಾಗಿ ಮುನ್ನೆಡೆಸಲು ನಾನು ಬದ್ಧನಾಗಿದ್ದು, ಕ್ಲಬ್ ಪೂರ್ವಾಧ್ಯಕ್ಷರ ಹಾಗೂ ಸದಸ್ಯರ ಸಹಕಾರವನ್ನು ಆಶಿಸುತ್ತೇನೆ. ರೋಟರಿ ಹಾಗೂ ಜೇಸಿ ಸಂಸ್ಥೆಯು ನನ್ನ ಕನಸನ್ನು ನನಸುಗೊಳಿಸುವ ವೇದಿಕೆ ಆಗಿದೆ. ರೋಟರಿ ಜಿಲ್ಲೆಯ ಏಳು ವಲಯಗಳಲ್ಲಿ ಜನಪರ ಯೋಜನೆಗಳನ್ನು ಜಾರಿ ಮಾಡುವ ಯೋಚನೆ ನಮ್ಮ ಮುಂದಿದೆ. ದ.ಕ ತೆಂಗು ರೈತ ಉತ್ಪಾದಕರು ನಷ್ಟವನ್ನು ಅನುಭವಿಸಿದ ಸಂದರ್ಭ ದ.ಕ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ಮೌಲ್ಯವರ್ಧಿತ ಸೇವೆಯ ಮೂಲಕ ಸ್ಪಂದಿಸಿರುತ್ತೇನೆ. ಹಿಂದಿನ ಅಧ್ಯಕ್ಷರುಗಳು ಕ್ಲಬ್‌ನ ಪಬ್ಲಿಕ್ ಇಮೇಜ್ ಅನ್ನು ಉಳಿಸಿಕೊಂಡಿದ್ದು ಅದನ್ನು ಮುಂದಿನ ದಿನಗಳಲ್ಲಿ ವಿಶೇಷ ಯೋಜನೆಗಳ ಮೂಲಕ ಮುಂದುವರೆಸಿಕೊಂಡು ಹೋಗಲು ಸದಸ್ಯರ ಪ್ರೀತಿ ಬೆರೆತ ಸಹಕಾರ ಬೇಕಾಗಿದೆ.
-ಕುಸುಮ್‌ರಾಜ್, ನೂತನ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಯುವ

‘ರೋಟರಿ ರೈಡ್ ರೈಟ್’ ಲಾಂಚ್..
ರೋಟರಿ ರಸ್ತೆ ಸುರಕ್ಷತೆ ಮತ್ತು ಜಾಗೃತಿ ಯೋಜನೆಯ ಜಿಲ್ಲಾ ಚೇರ್ಮನ್ ಡಾ.ಹರ್ಷಕುಮಾರ್ ರೈರವರ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಅಭಿಯಾನದ ಜನ ಜಾಗೃತಿ ಯೋಜನೆಯ ತಿಂಗಳಿಗೆ ಒಂದರಂತೆ ವರ್ಷದ ಕಾರ್ಯಕ್ರಮದ “ರೋಟರಿ ರೈಡ್ ರೈಟ್” ಇದರ ಬ್ಯಾನರ್‌ನ್ನು ಇತ್ತೀಚೆಗೆ ಪಿ.ಎಸ್.ಐ ಹುದ್ದೆಗೆ ಭಡ್ತಿ ಹೊಂದಿರುವ ಸಂಚಾರಿ ಠಾಣೆಯ ಪಿ.ಎಸ್.ಐ ಚಕ್ರಪಾಣಿರವರು ಲಾಂಚ್ ಮಾಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ದಿನೇಶ್ ಕುಮಾರ್ ಉಪಸ್ಥಿತರಿದ್ದರು.

ಸನ್ಮಾನ…
ಅಧ್ಯಯನದ ಜೊತೆಗೆ ತಂದೆಯವರಿಂದ ಸ್ತೋತ್ರ, ಸಂಸ್ಕೃತ, ವೇದಮಂತ್ರಗಳು ಹಾಗೂ ಪ್ರಾಯೋಗಿಕ ಪಾಠ, ಉಡುಪಿಯ ಸಂಸ್ಕೃತ ಅಧ್ಯಯನ ಪೂರೈಸಿ ಪ್ರಸ್ತುತ ದ್ವಿತೀಯ ವರ್ಷದ ವಿದ್ವತ್ ಅಧ್ಯಯನ ಮಾಡುತ್ತಿದ್ದು, ವಿವಾಹ ಹಾಗೂ ಕೆಲವು ವೈದಿಕ ಕಾರ್ಯಗಳಲ್ಲಿ ಪುರೋಹಿತೆಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯದ ಅತ್ಯಂತ ಕಿರಿಯ ಮಹಿಳಾ ಪುರೋಹಿತೆಯಾಗಿರುವ ಬಂಟ್ವಾಳ ತಾಲೂಕಿನ ದಾಸಕೋಡಿ ಗ್ರಾಮದ ಅನಘಾ ಕಶೆಕೋಡಿ ಹಾಗೂ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಕಾಲೇಜಿನಲ್ಲಿ ಬ್ಯಾಚಲರ್ಸ್ ಆಫ್ ಫಿಸಿಯೋಥೆರಪಿ ಪದವಿಯನ್ನು ಪೂರ್ಣಗೊಳಿಸಿ, ಪ್ರಸ್ತುತ ಅಲ್ಲಿಯೇ ಮಾಸ್ಟರ್ಸ್ ಆಫ್ ಫಿಸಿಯೋಥೆರಪಿ ಮಸ್ಕುಲೋಸ್ಕೆಲೆಟಲ್ ಮತ್ತು ಸ್ಪೋರ್ಟ್ಸ್ ಇಂಜುರಿ(ಆರ್ಥೊಪೆಡಿಕ್ಸ್) ವಿಭಾಗದಲ್ಲಿ ಮಾಡುತ್ತಿದ್ದು ಕಳೆದ ಮೂರು ವರ್ಷಗಳಿಂದ ಮುರ ಎಂಬಲ್ಲಿನ ಶಿವಸದನದಲ್ಲಿ ಹಿರಿಯ ನಾಗರಿಕರ ಆಶ್ರಮದಲ್ಲಿನ ಹಿರಿಯರಿಗೆ ಉಚಿತವಾಗಿ ವ್ಯಾಯಾಮ ಮಾಡಿಸುವುದರ ಜೊತೆಗೆ ಹಾಡನ್ನು ಹಾಡಿಸಿ ಮನೋರಂಜನೆ ನೀಡುವ ಮೂಲಕ ಕಮ್ಯೂನಿಟಿ ಸರ್ವಿಸ್ ವಿಭಾಗದಲ್ಲಿ ‘ರೋಟರಿ ಯುವ ಸಮಾಜ ಸೇವಾ ರತ್ನ’ ಪುರಸ್ಕೃತರಾಗಿರುವ ಡಾ.ಗಾನ ಪಿಲಿಂಜರವರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here