ಪುತ್ತೂರು: ಬೆಟ್ಟಂಪಾಡಿ ರೆಂಜದ ಕೃತಿಕಾ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿದ್ದ ಶ್ರೀಮಾತಾ ಡ್ರೆಸ್ಸಸ್ ಮಳಿಗೆಯು ಬೆಟ್ಟಂಪಾಡಿ ಬ್ಯಾಂಕ್ ಆಫ್ ಬರೋಡಾ ಶಾಖೆಯ ಹತ್ತಿರ ಸ್ಥಳಾಂತರಗೊಂಡು ಚೈತ್ರ ಡ್ರೆಸ್ಸಸ್ ಫ್ಯಾನ್ಸಿ ಮತ್ತು ಫೂಟ್ವೇರ್ ಎಂಬ ನೂತನ ಹೆಸರಿನಲ್ಲಿ ಜು.9ರಂದು ಶುಭಾರಂಭಗೊಂಡಿತು. ಮಾಲಕರ ತಂದೆ ತಾಯಿಯರಾದ ಶೇಷಪ್ಪ ನಾಯ್ಕ ಮತ್ತು ಸರಸ್ವತಿ ಕಜೆರವರು ದೀಪ ಬೆಳಗಿಸಿ ಮಳಿಗೆ ಉದ್ಘಾಟಿಸಿ ಶುಭಹಾರೈಸಿದರು.

ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು. ಮಾಲಕರಾದ ಚೈತ್ರ ಮತ್ತು ನಾಗರಾಜ್ ಕಜೆ ದಂಪತಿ ಅತಿಥಿಗಳನ್ನು ಸ್ವಾಗತಿಸಿ, ನಮ್ಮಲ್ಲಿ ಮಕ್ಕಳ, ಮಹಿಳೆಯರ, ಪುರುಷರ ವಿವಿಧ ವಿನ್ಯಾಸದ ಬಟ್ಟೆಗಳು, ಹಾಗೂ ಫ್ಯಾನ್ಸಿ, ಫೂಟ್ವೇರ್ಗಳು ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.