ಎವಿಜಿ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ

0

ಪುತ್ತೂರು: ಬನ್ನೂರು ಕೃಷ್ಣ ನಗರದ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೇದವ್ಯಾಸರಜನ್ಮದಿನವಾದ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಪಂಚಾಯತ್ ಅಧಿಕಾರಿ ಸುಂದರ ಗೌಡ ಕಳುವಾಜೆರವರು ಕಾರ್ಯಕ್ರಮ ಉದ್ಘಾಟಿಸಿ, ಗುರುಪೂರ್ಣಿಮೆ ದಿನದ ಮಹತ್ವದ ಸಂದೇಶವನ್ನು ನೀಡಿದರು. ಆಧ್ಯಾತ್ಮಿಕ ಗುರುವಾದ ವೇದವ್ಯಾಸರು ವೇದವನ್ನು ವಿಭಾಗ ಮಾಡಿ ಅವುಗಳಿಗೆ ಪ್ರಸರಣ ಕೊಟ್ಟು ಆ ಜ್ಞಾನವನ್ನು ಲೋಕಕ್ಕೆ ಸಮರ್ಪಿಸಿದರು. ಅವರ ಜ್ಞಾನ ಅನುಪಮ ಮತ್ತು ಮಹತ್ವವಾಗಿದ್ದು ಎಂದರು. ಇದು ಇವತ್ತಿನ ಎಲ್ಲಾ ಲೌಕಿಕ ಗುರುಗಳಿಗೆ ಆದರ್ಶ ಎಂದರು. ಲಾ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ ಯುಗಗಳಿಗೆ ಜ್ಞಾನವನ್ನು ಪಸರಿಸಿರುವ ವೇದವ್ಯಾಸ ಜ್ಞಾನದ ನಿಧಿ ಮತ್ತು ಬದುಕಿನ ಸಾರವನ್ನು ನೀಡಿದರು ಎಂದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಎ.ವಿ ನಾರಾಯಣ, ಆಡಳಿತ ಅಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಶಾಲಾ ನಿರ್ದೇಶಕಿ ಡಾ. ಅನುಪಮಾ, ಪ್ರತಿಭಾ ದೇವಿ, ಹಾಗೂ ಹೇಮಾವತಿ ಕಳುವಾಜೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗಡೆ, ಮತ್ತು ಶಾಲಾ ಪ್ರಾಂಶುಪಾಲ ಅಮರನಾಥ ಪಟ್ಟೆ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಕುಮಾರಿ ಜೋಶ್ನಾ ಮತ್ತು ತಂಡ ಪ್ರಾರ್ಥಿಸಿ, ಶಿಕ್ಷಕಿ ರಂಜಿತಾ ರೈ ಸ್ವಾಗತಿಸಿದರು. ಶಿಕ್ಷಕಿ ರಾಧಾ ಅತಿಥಿ ಪರಿಚಯ ಮಾಡಿ, ಶಿಕ್ಷಕಿ ರೀಮಾ ಲೋಬೊ ವಂದಿಸಿದರು. ಶಿಕ್ಷಕಿ ಯಶುಭ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here