ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮಕುಂಜ ನಿವಾಸಿ, ರಾಮ ಭಟ್ ಬೃಂದಾವನ ಇವರಿಗೆ ಭಾರತೀಯ ಜನತಾ ಪಾರ್ಟಿ ಕೊಯಿಲ ಮಹಾಶಕ್ತಿ ಕೇಂದ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ರಾಮಕುಂಜ ಶಕ್ತಿ ಕೇಂದ್ರದ ಅಧ್ಯಕ್ಷ ಉಮೇಶ್ ಕಲ್ಲೇರಿ, ಬೂತ್ ಅಧ್ಯಕ್ಷ ಶಶೀಂದ್ರ ನಾಯಕ್, ಹಿರಿಯರಾದ ಧರ್ಮಪಾಲ ರಾವ್ ಕೆ., ಲಕ್ಷ್ಮಿನಾರಾಯಣ ರಾವ್ ಆತೂರು, ಜೀವನ್ ವಳೆಂಜ ಉಪಸ್ಥಿತರಿದ್ದರು.