ಶ್ರೀ ಪ್ರಗತಿ ವಿಸ್ತಾರ ಎವಿಯೇಷನ್ ಕಾಲೇಜು ವಿದ್ಯಾರ್ಥಿಗಳಿಗೆ Spicejet ತಜ್ಞರಿಂದ ಪ್ರಭಾವಿ ಉಪನ್ಯಾಸ

0

ಪುತ್ತೂರು: ಬೆಂಗಳೂರಿನ ಖ್ಯಾತ ವಿಮಾನಯಾನ ಸಂಸ್ಥೆಯಾದ ಸ್ಕೈ ಬರ್ಡ್ ಎವಿಯೇಷನ್ ನ ಪುತ್ತೂರಿನ ಅಧಿಕೃತ ಫ್ರಾನ್ಚೈಸಿ ಸಂಸ್ಥೆಯಾದ ಎಪಿಎಂಸಿ ರಸ್ತೆಯ ಮಾನೈ ಆರ್ಕ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪ್ರಗತಿ ವಿಸ್ತಾರ ಎವಿಯೇಷನ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಜು.12ರಂದು ವಿಶಿಷ್ಟ ಅಧ್ಯಯನ ಕಾರ್ಯಗಾರವನ್ನು ಆಯೋಜಿಸಲಾಯಿತು.

ಈ ಕಾರ್ಯಗಾರದಲ್ಲಿ Spicejet ವಿಮಾನಯಾನ ಸಂಸ್ಥೆಯಲ್ಲಿ 14 ವರ್ಷಗಳ ಅನುಭವ ಹೊಂದಿರುವ ಪ್ರಸ್ತುತ ಮುಂಬೈನಲ್ಲಿ ಕೆಲಸ ಮಾಡುತ್ತಿರುವ Line check crew ತಜ್ಞರಾದ ಬಿಂದು ಸಾಗರ್ ಶೆಟ್ಟಿಯವರು ವಿಶೇಷ ಉಪನ್ಯಾಸವನ್ನು ನೀಡಿದರು. ಅವರು ತಮ್ಮ ದೀರ್ಘಕಾಲದ ಉದ್ಯೋಗ ಅನುಭವವನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ವಿಮಾನಯಾನ ಉದ್ಯಮದ ನೈಜ ಸ್ವರೂಪವನ್ನು ಪರಿಚಯಿಸಿದರು.

ಈ ಕಾರ್ಯಗಾರವು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದ್ದು, Airline ಉದ್ಯೋಗದ ಅವಕಾಶಗಳು, ಉದ್ಯಮದಲ್ಲಿ ಎದುರಿಸಬೇಕಾದ ಸವಾಲುಗಳು ಮತ್ತು ಪ್ರಾಥಮಿಕ ತರಬೇತಿಯ ಮಹತ್ವದ ಕುರಿತು ಸ್ಪಷ್ಟತೆಯನ್ನೊದಗಿಸಿತು. ಬಿಂದುಸಾಗರ್ ಶೆಟ್ಟಿಯವರು ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ, ಅವರ ಗೊಂದಲಗಳಿಗೆ ಸಮರ್ಪಕ ಉತ್ತರಗಳನ್ನು ನೀಡಿದರು ಹಾಗೂ ಉದ್ಯೋಗಕ್ಕೆ ತಯಾರಿ ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದರು. ಉಪನ್ಯಾಸದಲ್ಲಿ ಅವರು ವಿಮಾನಯಾನ ಕ್ಷೇತ್ರದಲ್ಲಿ ಅಗತ್ಯವಿರುವ ನೈಪುಣ್ಯತೆಗಳು ಮತ್ತು ವೃತ್ತಿಪರ ಗುಣಗಳ ಬಗ್ಗೆ ವಿವರಿಸಿದರು.

ವಿಶೇಷವಾಗಿ Importance of smile, body language, eye contact ಹಾಗೆಯೇ ಏವಿಯೇಷನ್ ಪ್ರೊಫೈಲ್ ಅನ್ನು ಹೇಗೆ ರೂಪಿಸಬೇಕು, ಲೋಡ್ ಮತ್ತು ಟ್ರಿಮ್ ನಿಯಂತ್ರಣದ ಮಹತ್ವ, ಲೈಸೆನ್ಸ್ ನಿರ್ವಹಣೆ ಹಾಗೂ ಏವಿಯೇಷನ್ ಕ್ಷೇತ್ರದಲ್ಲಿ ನಡೆಯುವ ಪರೀಕ್ಷೆಗಳ ಪ್ರಕ್ರಿಯೆಗಳು, CRM (Crew Resource Management) ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಶ್ರೀ ಪ್ರಗತಿ ಎಜುಕೇಷನ್ ಫೌಂಡೇಶನ್‌ನ ಕಾರ್ಯದರ್ಶಿ ಗೋಕುಲ್‌ನಾಥ್ ಪಿ.ವಿ., ಏವಿಯೇಷನ್ ತರಬೇತುದಾರರು, ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪ್ರೇರಣೆಯ ಮೂಲವಾಗಿದ್ದು, ಭವಿಷ್ಯದ ಏವಿಯೇಷನ್ ವೃತ್ತಿಗೆ ಒಂದು ದಿಕ್ಕು ನೀಡುವಂತಾಗಿದೆ.

LEAVE A REPLY

Please enter your comment!
Please enter your name here