ಪುತ್ತೂರು: ಪ್ರಗತಿಪರ ಕೃಷಿಕರು, ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರೂ ಆಗಿರುವ ಬಾರಿಕೆ ನಾರಾಯಣ ರೈ ಮತ್ತು ದೇವಕಿ ಎನ್ ರೈಯವರ ದಾಂಪತ್ಯ ಬದುಕಿನ ಸುವರ್ಣ ಸಂಭ್ರಮದ ಅಂಗವಾಗಿ ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಜು.13 ರಂದು ಅವರ ನಿವಾಸದಲ್ಲಿ ಸನ್ಮಾನಿಸುವ ಮೂಲಕ ಶುಭಾಶಯ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಬಾರಿಕೆ ನಾರಾಯಣ ರೈಯವರು ಸಂಘವನ್ನು ಕಟ್ಟಿ ಬೆಳೆಸಿದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಬಾರಿಕೆ ನಾರಾಯಣ ರೈ ದಂಪತಿಗಳ ಮುಂದಿನ ಜೀವನ ಸುಖ ಶಾಂತಿ ನೆಮ್ಮದಿ ಸಂತೋಷದಿಂದ ಕೂಡಿರಲಿ ಶ್ರೀ ದೇವರ ಆಶೀರ್ವಾದ ಅವರ ಮೇಲಿರಲಿ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸುಧಾಕರ ಆಳ್ವ, ನಿರ್ದೇಶಕರುಗಳಾದ ಜೈ ರಾಜ್ ಭಂಡಾರಿ , ಮಿತ್ರದಾಸ ರೈ ಡೆಕ್ಕಳ ,ಪ್ರೇಮ ರಾಜ ರೈ ,ರಾಮಣ್ಣ ಗೌಡ , ವೀರಪ್ಪ ಮೂಲ್ಯ ,ಕಸ್ತೂರಿ ಟಿ ಶೆಟ್ಟಿ ,ಶರಣಾಕ್ಷಿ ಆಳ್ವ, ಕಾರ್ಯದರ್ಶಿ ಶಸರೋಜಾ ಆರ್ ಶೆಟ್ಟಿ ,ಸಹಾಯಕಿ ಶ್ರೀಮತಿ ಸುರೇಶ್ ಉಪಸ್ಥಿತರಿದ್ದರು. ನಿರ್ದೇಶಕ ಶ್ಯಾಮ್ ಸುಂದರ್ ರೈ ಕೊಪ್ಪಳ ಕಾರ್ಯಕ್ರಮ ನಿರೂಪಿಸಿದರು.