

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆಯುವ 59ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ದೇವಳದ ನಟರಾಜ ವೇದಿಕೆಯ ಬಳಿ ವಿಗ್ರಹ ಮತ್ತು ದೇವಳದ ಎದುರು ಗದ್ದೆಯಲ್ಲಿ ಚಪ್ಪರ ಮುರ್ಹೂತ ಕಾರ್ಯಕ್ರಮ ಜು.14ರಂದು ರಂದು ಬೆಳಗ್ಗೆ ನಡೆಯಿತು.
ಪ್ರತಿ ವರ್ಷ ಸಂಕಷ್ಟ ಚತುರ್ಥಿಯ ದಿನ ನಡೆಯುವ ಗಣಪತಿ ವಿಗ್ರಹ ಮುಹೂರ್ತಕ್ಕೆ ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗಣಪತಿ ಗುಡಿಯಲ್ಲಿ ಸಂಕಲ್ಪ ನೆರವೇರಿಸಲಾಯಿತು. ಬಳಿಕ ದೇವಳದ ಸತ್ಯಧರ್ಮ ನಡೆಯಲ್ಲಿ ದೇವಳದ ಪ್ರಧಾನ ಅರ್ಚಕ ವೇ ವಿ.ಎಸ್ ಭಟ್ ಅವರು ಪ್ರಾರ್ಥನೆ ಮಾಡಿದರು. ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಶ್ರೀ ಮಹಾಮ್ಮಾಯಿ ದೇವಸ್ಥಾನ, ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ, ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು.
ನಟರಾಜ ವೇದಿಕೆಯ ಬಳಿ ವಿಗ್ರಹ ರಚನೆ ಮುಹೂರ್ತ:
ದೇವಸ್ಥಾನಗಳಲ್ಲಿ ಪ್ರಾರ್ಥನೆ ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಶಿಲ್ಪಿ ಶ್ರೀನಿವಾಸ ಪ್ರಭು ಅವರು ವಿಗ್ರಹ ರಚನೆಗೆ ಮುಹೂರ್ತ ನೆರವೇರಿಸಿದರು.
ಈ ಸಂದರ್ಭ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಉಪಾಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ಖಜಾಂಜಿ ಶ್ರೀನಿವಾಸ ಮೂಲ್ಯ, ಜೊತೆ ಕಾರ್ಯದರ್ಶಿ ನೀಲಂತ್ ಬೊಳುವಾರು, ದಯಾನಂದ ಆದರ್ಶ ಆಸ್ಪತ್ರೆ, ಚಂದ್ರಶೇಖರ್, ಚಂದ್ರಶೇಖರ್ ಗೌಡ, ಪೂವಪ್ಪ, ಪುಷ್ಪರಾಜ್, ಪ್ರವೀಣ್ ನಾೖಕ್, ಮಲ್ಲೇಶ್ ಆಚಾರ್ಯ, ದಿನೇಶ್ ಪಂಜಿಗ, ಕಿರಣ್‌ಶಂಕರ್ ಮಲ್ಯ, ಉದಯ ಹೆಚ್, ಜಯಂತ್ ಕುಂಜೂರುಪಂಜ, ರಮೇಶ್, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಶ್ರೀಧರ್ ಪಟ್ಲ, ರಮೇಶ್ ಗೌಡ, ಆಶೀರ್ವಾದ ಶಾಮಿಯಾನದ ರಾಮಕೃಷ್ಣ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಚಪ್ಪರ ಮುಹೂರ್ತ:
ಶ್ರೀ ಗಣೇಶ ವಿಗ್ರಹದ ಮುಹೂರ್ತದ ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಚಪ್ಪರ ಮುಹೂರ್ತ ನೆರವೇರಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಚಪ್ಪರ ಮುಹೂರ್ತ ನೆರವೇರಿಸಿದರು. ಚಪ್ಪರ ಮುಹೂರ್ತಕ್ಕೆಂದೇ ನೂತನವಾಗಿ ಸಿದ್ದಪಡಿಸಲಾದ ಕಂಬವನ್ನು ಅಲಂಕೃತಗೊಳಿಸಿ ಕೇಸರಿ ಧ್ವಜದೊಂದಿಗೆ ನಿಲ್ಲಿಸಲಾಯಿತು.