ಪುತ್ತೂರು: ಷಣ್ಮುಖ ಫ್ರೆಂಡ್ಸ್ ಕೊಳ್ತಿಗೆ ಪಾಂಬಾರು ಇದರ ನೇತೃತ್ವದಲ್ಲಿ ಜೂ.13ರಂದು ಪಾಂಬಾರು, ಕೊಳ್ತಿಗೆ ಭಾಗಗಳಲ್ಲಿ ವಿದ್ಯುತ್ ಎಚ್.ಟಿ ಮಾರ್ಗಕ್ಕೆ ತಾಗುವ ಮರದ ಕೊಂಬೆ ರೆಂಬೆಗಳನ್ನು ಸಾಧಾರಣ ಐದು ಕಿ.ಮೀ ಉದ್ದಕ್ಕೂ ಶ್ರಮದಾನದ ಮೂಲಕ ತೆರವು ಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಸಂದರ್ಭದಲ್ಲಿ ಷಣ್ಮುಖ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಚಿನ್ನಪ್ಪ ಕೆರೆ ಮೂಲೆ, ಗೌರವ ಅಧ್ಯಕ್ಷ ಜಯ ಪ್ರವೀಣ್ ಪಾಂಬಾರು, ಕಾರ್ಯದರ್ಶಿ ಕಿಶೋರ್ ಎಂ.ಡಿ, ಫ್ರೆಂಡ್ಸ್ ಕ್ಲಬ್ ನ ಸದಸ್ಯರು, ಹಾಗೂ ಅಡ್ಕರ್ ಗುರಿ ಫ್ರೆಂಡ್ಸ್ ಕ್ಲಬ್ ನ ಸದಸ್ಯರು, ಪವರ್ ಮ್ಯಾನ್ ಮಿಥುನ್ ಮತ್ತು ಕಿರಣ್ ಉಪಸ್ಥಿತರಿದ್ದರು. ಚಿರಣ್ ಕುಮಾರ್ ಕುಂಡಡ್ಕ ಮತ್ತು ಅರವಿಂದ್ ಎಕ್ಕಡ್ಕ ಊಟ ಉಪಹಾರದ ವ್ಯವಸ್ಥೆಯನ್ನು ಆಯೋಜನೆ ಮಾಡಿದರು.
