ಜು.16 ರಿಂದ 20 ಎಸ್‌ಪಿವೈಎಸ್‌ಎಸ್‌ನಿಂದ ಪುತ್ತೂರಿನಲ್ಲಿ ರಾಜ್ಯ,ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರ

0


ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ವತಿಯಿಂದ ವರ್ಷಕ್ಕೊಮ್ಮೆ ನಡೆಯುವ ರಾಜ್ಯ, ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರವು ಈ ಬಾರಿ ಪುತ್ತೂರಿನಲ್ಲಿ ನಡೆಯಲಿದ್ದು. ಜು.16ರಿಂದ 20ರ ತನಕ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಎಸ್‌ಪಿವೈಎಸ್‌ಎಸ್‌ನ ಪುತ್ತೂರು ತಾಲೂಕು ಸಂಚಾಲಕ ಕೃಷ್ಣಾನಂದ ನಾಯಕ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಸಂಸ್ಕಾರ, ಸಂಘಟನೆ, ಸೇವೆ ಎಂಬ ಧ್ಯೇಯದೊಂದಿಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಉಚಿತ ಯೋಗ ಶಿಕ್ಷಣ ನೀಡುವ ಕಾರ್ಯಕ್ರಮವಾಗಿದೆ. ಈಗಾಗಲೇ ರಾಜ್ಯದಲ್ಲಿ 2 ಸಾವಿರ ಶಾಖೆಗಳಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 300 ಶಾಖೆಗಳಿವೆ. ಪುತ್ತೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆರಂಭಗೊಂಡು 25 ಶಾಖೆಗಳಿದ್ದು, ಸುಮಾರು 1200 ಮಂದಿ ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಶುಲ್ಕ ಇರುವುದಿಲ್ಲ. ಎಲ್ಲವು ಸೇವೆಯ ಮೂಲಕ ನಡೆಯುತ್ತದೆ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಪ್ರಶಿಕ್ಷಣ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ಹೊರ ರಾಜ್ಯದವರು ಭಾಗವಹಿಸಲಿದ್ದಾರೆ. ಪ್ರಶಿಕ್ಷಣ ಶಿಬಿರಗಳು 5 ವಿಭಾಗದಲ್ಲಿ ನಡೆಯಲಿದೆ. ಜು.16ರಂದು ಸಂಜೆ ಗಂಟೆ 6ಕ್ಕೆ ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಉದ್ಘಾಟಿಸಲಿದ್ದಾರೆ. ನೇತ್ರಾವತಿ ವಲಯದ ಸಂಚಾಲಕ ಅಶೋಕ ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ಶಿಕ್ಷಣ ಪ್ರಮುಖ ಭರತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಜು.17ಕ್ಕೆ ಸಂಜೆ ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ ಸತ್ಸಂಗ, ಜು.17ಕ್ಕೆ ಶ್ರೀ ಲಲಿತ ಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ, ಮಾತೃ ಭೋಜನ, ಜು.19ಕ್ಕೆ ಆರೋಗ್ಯದ ಕಡೆಗೆ ಯೋಗ ನಡಿಗೆ ಮತ್ತು ಮನೆ ಮನೆ ಅತಿಥಿ ಸತ್ಕಾರ ನಡೆಯಲಿದೆ. ಜು.20ಕ್ಕೆ ಬೆಳಿಗ್ಗೆ ಗಂಟೆ 11ಕ್ಕೆ ಸಮಾರೋಪ ಸಮಾರಂಭದಲ್ಲಿ ಎಸ್‌ಪಿಐಎಸ್‌ಎಸ್‌ನ ದ.ಕ.ಜಿಲ್ಲಾ ಸಂಚಾಲಕ ನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘಟನಾ ವಿಭಾಗದ ಪ್ರಾಂತ ಸಂಚಾಲಕ ಮಾರ್ತಾಂಡೇಯ ಸಮಾರೋಪ ನುಡಿಯನ್ನಾಡಲಿದ್ದಾರೆ. ಉಪಾಧ್ಯಕ್ಷ ಚೆನ್ನಬಸಪ್ಪ ಅವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು. ಶಿಬಿರವು ಏಕಕಾಲದಲ್ಲಿ ಸಾಮಾನ್ಯ, ಹಿರಿಯ, ರಾಷ್ಟ್ರೀಯ ಮಟ್ಟದ, ವೃತ್ತಿಪರ ವಿಭಾಗ ಮತ್ತು 10ನೇ ರಾಜ್ಯಮಟ್ಟದ ಯುವಕ, ಯುವತಿಯರ ವಿಭಾಗದಲ್ಲಿ ನಡೆಯಲಿದೆ ಎಂದವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಎಸ್‌ಪಿವೈಎಸ್‌ಎಸ್‌ನ ತಾಲೂಕು ಸಹಸಂಚಾಲಕಿ ವೀಣಾ ಆಚಾರ್ಯ, ಭಜನಾ ಪ್ರಮುಖ್ ಸತೀಶ್, ಶಿಕ್ಷಣ ವಿಭಾಗದ ಶುಭಾ ಶೆಟ್ಟಿ, ಮಾದ್ಯಮ ಪ್ರಮುಖ್ ಮುರಳಿಧರ ನಾಯಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here